7

ಕಲ್ಲು ತೂರಾಟ ಖಂಡಿಸಿ ಬಸ್‌ ಸಂಚಾರ ಸ್ಥಗಿತ

Published:
Updated:

ಕಾಸರಗೋಡು: ಬಾಬರಿ ಮಸೀದಿ ಧ್ವಂಸದ ಕರಾಳ ದಿನ ಆಚರಣೆ ವೇಳೆ ಕಾಸರಗೋಡು ಮತ್ತು ಮಂಜೇಶ್ವರ ತಾಲ್ಲೂಕುಗಳಲ್ಲಿ ಕಿಡಿಗೇಡಿಗಳು ವಾಹನಗಳಿಗೆ ಕಲ್ಲು ತೂರಾಟ ನಡೆಸಿದ್ದಾರೆ.

ಇದನ್ನು ಖಂಡಿಸಿ ಗುರುವಾರ ಕಾಸರಗೋಡು- ತಲಪಾಡಿ ಹೆದ್ದಾರಿ ಹಾಗೂ ಕುಂಬಳೆ -ಬದಿಯಡ್ಕ -ಮುಳ್ಳೇರಿಯ ಮಾರ್ಗದಲ್ಲಿ ಬಸ್‌ ಸಂಚಾರವನ್ನು ಸ್ಥಗಿತಗೊಳಿಸಲಾಯಿತು.

ಕಲ್ಲು ತೂರಾಟದಿಂದ ಬಸ್‌ ಚಾಲಕ ಹೃತೇಶ್ ಎಂಬವರ ಕಣ್ಣಿಗೆ ತೀವ್ರ ಗಾಯವಾಗಿದೆ. ಈ ಸಂಬಂಧ ಕೂಡ್ಲುವಿನ ಇಂಜಮಾಮ್, ಮುಹಮ್ಮದ್ ಅಜ್ಮಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry