ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎಂ ಜೊತೆ ಫೋಟೊಕ್ಕೆ ಪೈಪೋಟಿ !

Last Updated 7 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಶಿರಸಿ:‌ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಿಡಿದುಕೊಂಡು ಫೋಟೊ ತೆಗೆಯಿಸಿಕೊಂಡರು. ಸಿದ್ದರಾಮಯ್ಯ ಬಲಭಾಗದಲ್ಲಿ ಶ್ರೀಲತಾ, ಎಡಭಾಗದಲ್ಲಿ ನಗರಸಭೆಯ ಪ್ರಭಾರಿ ಅಧ್ಯಕ್ಷೆ ಅರುಣಾ ವೆರ್ಣೇಕರ್ ನಿಂತಾಗ ಹಲವರು ಫೋಟೊ ಕ್ಲಿಕ್ಕಿಸಿದರು.

ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆಗೆ ಗುರುವಾರ ನಗರಕ್ಕೆ ಬಂದ ಸಿದ್ದರಾಮಯ್ಯ ಅವರನ್ನು ಸ್ವಾಗತಿಸಲು ಮಾರಿಕಾಂಬಾ ಕ್ರೀಡಾಂಗಣದ ಹೆಲಿಪ್ಯಾಡ್‌ಗೆ ಈ ಇಬ್ಬರೂ ಹೋಗಿದ್ದರು.

‘‘ನನ್ನನ್ನು ನೋಡಿದ ಮುಖ್ಯಮಂತ್ರಿ, ‘ಮನೆ ಮಗಳು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆಯಾಗಿದ್ದಾಳೆ’ ಎಂದರು. ಆಗ ಭಾವುಕಳಾಗಿ ಅವರನ್ನು ಹಿಡಿದುಕೊಂಡಿದ್ದು ನಿಜ’’ ಎಂದು ಶ್ರೀಲತಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ದಲಿತ ಸಂಘರ್ಷ ಸಮಿತಿಯ ಸಂಚಾಲಕರಾಗಿರುವ ನನ್ನ ಪತಿಗೆ ಮುಖ್ಯಮಂತ್ರಿ ಹಾಗೂ ಸಚಿವ ಎಚ್.ಸಿ. ಮಹದೇವಪ್ಪ ಒಂದು ದಶಕದ ಹಿಂದಿನಿಂದ ಪರಿಚಿತರು. ಅವರು ತಂದೆ ಸಮಾನರು. ಆದರೆ ಕೆಲವು ದೃಶ್ಯ ಮಾಧ್ಯಮದವರು ಅದನ್ನು ಅತಿಯಾಗಿ ರಂಜಿಸಿರುವುದು ನೋವುಂಟು ಮಾಡಿದೆ’ ಎಂದಿದ್ದಾರೆ.

‘ಭಾಷೆಯ ಮೇಲೆ ಹಿಡಿತವಿರಲಿ’

ಶಿರಸಿ: ‘‍ಪ್ರಜಾಪ್ರಭುತ್ವದಲ್ಲಿ ಅಧಿಕಾರ ಶಾಶ್ವತವಲ್ಲ. ರಾಜಕಾರಣಿಯಾದವರು ಬಳಸುವ ಭಾಷೆಯ ಮೇಲೆ ಹಿಡಿತ ಇಟ್ಟುಕೊಳ್ಳುವುದು ಒಳ್ಳೆಯದು. ಕೆಟ್ಟ ಭಾಷೆ ಬಳಸಿದರೆ ಜನರು ನಮ್ಮನ್ನು ದೊಡ್ಡವರನ್ನಾಗಿ ಮಾಡುತ್ತಾರೆ ಎಂದುಕೊಂಡಿದ್ದರೆ ಅದು ಮೂರ್ಖತನ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಇಲ್ಲಿ ಮಾರ್ಮಿಕವಾಗಿ ಹೇಳಿದರು.

ಶಿರಸಿ– ಸಿದ್ದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ₹148 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸಂಸ್ಕೃತಿ, ಸಂಸ್ಕಾರ ಇರುವವರು ಸಾಂವಿಧಾನಿಕ ಪದ ಬಳಸಿ ಮಾತನಾಡಬೇಕು. ರಾಜಕಾರಣದಲ್ಲಿ ಧರ್ಮ ಇರಬೇಕು, ಆದರೆ ಧರ್ಮವೇ ರಾಜಕಾರಣ ಆಗಬಾರದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT