7

ಶಾಸಕ ಸೋಮಶೇಖರ್‌ಗೆ ವಾರಂಟ್

Published:
Updated:

ಮೈಸೂರು: ಮಾನಹಾನಿ ಪ್ರಕರಣವೊಂದರಲ್ಲಿ ವಿಚಾರಣೆಗೆ ಹಾಜರಾಗದ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ (ಕಾಂಗ್ರೆಸ್‌) ಎಂ.ಕೆ.ಸೋಮಶೇಖರ್ ವಿರುದ್ಧ ಇಲ್ಲಿನ ಜೆಎಂಎಫ್‌ಸಿ 3ನೇ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿದೆ.

ಜನಸಂಗ್ರಾಮ ಪರಿಷತ್‌ನ ಎಂ.ಸಿ.ಚಿಕ್ಕಣ್ಣ ಅವರು 2008ರಲ್ಲಿ ಸೋಮಶೇಖರ್ ವಿರುದ್ಧ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಮೀಸಲಾತಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಸೋಮಶೇಖರ್ ಪತ್ರಿಕಾಗೋಷ್ಠಿ ನಡೆಸಿ ಚಿಕ್ಕಣ್ಣ ವಿರುದ್ಧ ಹೇಳಿಕೆ ನೀಡಿದ್ದರು. ಈ ಹೇಳಿಕೆಗಳ ವಿರುದ್ಧ ಚಿಕ್ಕಣ್ಣ ಮಾನಹಾನಿ ಪ್ರಕರಣವನ್ನು 2009ರಲ್ಲಿ ದಾಖಲಿಸಿದ್ದರು.

ಈವರೆಗೆ 80ಕ್ಕೂ ಹೆಚ್ಚು ವಿಚಾರಣೆಗಳು ನಡೆದಿವೆ. ಡಿ. 4ರಂದು ನಡೆದ ವಿಚಾರಣೆ ಸಮಯದಲ್ಲಿ ಸೋಮಶೇಖರ್ ಹಾಗೂ ಅವರ ವಕೀಲರು ಹಾಜರಾಗದೇ ಇದ್ದುದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿದೆ. ಮುಂದಿನ ವಿಚಾರಣೆಯನ್ನು ಫೆಬ್ರುವರಿ 2ಕ್ಕೆ ಮುಂದೂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry