7

ಕ್ಲಬ್‌ನಲ್ಲಿ ರಮ್ಮಿ ಆಟ: ಜೂಜು ಅಲ್ಲ

Published:
Updated:

ನವದೆಹಲಿ: ಕ್ಲಬ್‌ಗಳಲ್ಲಿ ಸಣ್ಣ ಮೊತ್ತದ ಹಣ ಇಟ್ಟು ರಮ್ಮಿ ಆಡುವುದು ಜೂಜಾಟ ಅಲ್ಲ ಎಂಬ ಕೆಳ ನ್ಯಾಯಾಲಯದ ಆದೇಶವನ್ನು ದೆಹಲಿ ಹೈಕೋರ್ಟ್‌ ಎತ್ತಿ ಹಿಡಿದಿದೆ.

‘ಸುಪ್ರೀಂ ಕೋರ್ಟ್‌ ಹಿಂದೆ ನೀಡಿದ ತೀರ್ಪುಗಳ ಪ್ರಕಾರ, ಕೆಲವೇ ರೂಪಾಯಿ ಪಣ ಇಟ್ಟು ಕ್ಲಬ್‌ಗಳಲ್ಲಿ ರಮ್ಮಿ ಆಡುವುದು ಜೂಜಾಟ ಆಗುವುದಿಲ್ಲ’ ಎಂದು ನ್ಯಾಯಮೂರ್ತಿ ವಾಲ್ಮೀಕಿ ಜೆ. ಮೆಹ್ತಾ ಹೇಳಿದ್ದಾರೆ.

ಸೆಂಟ್ರಲ್ ಸೆಕ್ರೆಟರಿಯೇಟ್‌ ಕ್ಲಬ್‌ನಲ್ಲಿ ಜೂಜಾಟ ನಡೆಯುತ್ತಿದೆ. ಅದರ ಸುತ್ತ ದೊಡ್ಡ ಮಾಫಿಯಾವೇ ಇದೆ ಎಂದು ಕ್ಲಬ್‌ನಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್‌ ಕುಮಾರ್‌ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಇದನ್ನು ನ್ಯಾಯಾಲ ಯದಲ್ಲಿ ಸಾಬೀತು ಮಾಡಲು ಅವರಿಗೆ ಸಾಧ್ಯವಾಗಲಿಲ್ಲ. ಸುಳ್ಳು ದೂರು ದಾಖಲಿಸಿದ್ದಕ್ಕಾಗಿ ಅವರಿಗೆ ವಿಚಾರಣಾ ನ್ಯಾಯಾಲಯವು ₹3 ಲಕ್ಷ ದಂಡ ಹಾಕಿತ್ತು. ಅದನ್ನು ಪ್ರಶ್ನಿಸಿ ಸುರೇಶ್‌ ಕುಮಾರ್‌ ಅವರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಕುಮಾರ್‌ ಅವರನ್ನು ಕ್ಲಬ್‌ನ ಕೆಲಸದಿಂದ ತೆಗೆದು ಹಾಕಲಾಗಿದೆ. ಆ ಹತಾಶೆಯಿಂದ ಅವರು ದೂರು ನೀಡಿದ್ದಾರೆ. ಕ್ಲಬ್‌ನ ವಿರುದ್ಧ ಸೇಡು ತೀರಿಸಿಕೊಳ್ಳುವುದು ಅಥವಾ ಕ್ಲಬ್‌ನ ಮೇಲೆ ಒತ್ತಡ ಹೇರುವುದು ಕುಮಾರ್‌ ಅವರ ಉದ್ದೇಶ ಆಗಿರಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry