ಗುರುವಾರ , ಫೆಬ್ರವರಿ 25, 2021
31 °C

ಪ್ರಿಯಾಂಕಾ ‘ಏಷ್ಯಾದ ಮಾದಕ ಮಹಿಳೆ’

ಪಿಟಿಐ Updated:

ಅಕ್ಷರ ಗಾತ್ರ : | |

ಪ್ರಿಯಾಂಕಾ ‘ಏಷ್ಯಾದ ಮಾದಕ ಮಹಿಳೆ’

ಲಂಡನ್‌: ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಅವರು 2017ನೇ ಸಾಲಿನ ‘ಏಷ್ಯಾದ ಅತ್ಯಂತ ಮಾದಕ ಮಹಿಳೆ’ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

2016ನೇ ಸಾಲಿನಲ್ಲಿ ಈ ಖ್ಯಾತಿ ಪಡೆದಿದ್ದ ನಟಿ ದೀಪಿಕಾ ಪಡುಕೋಣೆ ಅವರಿಗೆ ಈ ಬಾರಿ ಮೂರನೇ ಸ್ಥಾನ ಲಭಿಸಿದೆ.

ಬ್ರಿಟನ್‌ ಮೂಲದ ‘ಈಸ್ಟರ್ನ್‌ ಐ’ ವಾರಪತ್ರಿಕೆ ಪ್ರತಿವರ್ಷ ಏಷ್ಯಾದ ಮಾದಕ ಮಹಿಳೆಯರ ಪಟ್ಟಿಯನ್ನು ಸಿದ್ಧಪಡಿಸುತ್ತದೆ. ಈ ಹಿಂದೆ ನಾಲ್ಕು ಬಾರಿ ಪ್ರಿಯಾಂಕಾ ಹೆಸರು ಪಟ್ಟಿಯಲ್ಲಿ ಇತ್ತು. ಆದರೆ, ಇದೇ ಮೊದಲ ಬಾರಿ ‘ಏಷ್ಯಾದ ಅತ್ಯಂತ ಮಾದಕ ಮಹಿಳೆ’ ಎಂಬ ಖ್ಯಾತಿ ಪಡೆದುಕೊಂಡಿದ್ದಾರೆ.

‘ನನ್ನ ಆಯ್ಕೆ ಸಂತಸ ತಂದಿದೆ. ಇದಕ್ಕಾಗಿ ನಡೆದ ಆನ್‌ಲೈನ್‌ ಸಮೀಕ್ಷೆಯಲ್ಲಿ ನನಗೆ ಮತ ಹಾಕಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ನಟಿ ಪ್ರಿಯಾಂಕ ಅವರು ಪ್ರತಿಕ್ರಿಯಿಸಿದ್ದಾರೆ.

ನಟಿ ಅಲಿಯಾ ಭಟ್‌ ಮತ್ತು ಪಾಕಿಸ್ತಾನ ನಟಿ ಮಹಿರಾ ಖಾನ್‌ ಅವರು ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನ ಪಡೆದಿದ್ದಾರೆ. ನಟಿ ಶ್ರೀದೇವಿ ಅವರಿಗೆ 49ನೇ ಸ್ಥಾನ ದೊರತಿದ್ದು, ಪಟ್ಟಿಯಲ್ಲಿ ಅತಿ ಹಿರಿಯರಾಗಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.