ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ; ಅಭಿಮನ್ಯು ಈಶ್ವರನ್‌ ಶತಕ

Last Updated 7 ಡಿಸೆಂಬರ್ 2017, 19:45 IST
ಅಕ್ಷರ ಗಾತ್ರ

ಜೈಪುರ: ಆರಂಭಿಕ ಆಟಗಾರ ಅಭಿಮನ್ಯು ಈಶ್ವರನ್‌ (129;‌ 246ಎ, 17ಬೌಂ) ಅವರ ಮನಮೋಹಕ ಶತಕ ಮತ್ತು ಅನುಸ್ತಪ್‌ ಮಜುಂದಾರ್‌ (94; 177ಎ, 11ಬೌಂ) ಅವರ ಅರ್ಧಶತಕದ ನೆರವಿನಿಂದ ಬಂಗಾಳ ತಂಡ ಗುಜರಾತ್‌ ಎದುರಿನ ರಣಜಿ ಟ್ರೋಫಿ ಮೊದಲ ಕ್ವಾರ್ಟರ್ ಫೈನಲ್‌ನಲ್ಲಿ ಉತ್ತಮ ಮೊತ್ತದತ್ತ ಮುನ್ನಡೆದಿದೆ.

ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ಗುರುವಾರ ಮೊದಲು ಬ್ಯಾಟ್‌ ಮಾಡಿದ ಬಂಗಾಳ 86 ಓವರ್‌ಗಳಲ್ಲಿ 6 ವಿಕೆಟ್‌ಗೆ 261ರನ್‌ ಗಳಿಸಿದೆ.

ಬ್ಯಾಟಿಂಗ್‌ ಆರಂಭಿಸಿದ ಬಂಗಾಳ ತಂಡ ಆರಂಭಿಕ ಸಂಕಷ್ಟ ಎದುರಿಸಿತು. ಅಭಿಷೇಕ್‌ ರಾಮನ್‌ (5), ವೃತ್ತಿಕ್‌ ಚಟರ್ಜಿ (4), ನಾಯಕ ಮನೋಜ್‌ ತಿವಾರಿ (1) ಮತ್ತು ಶ್ರೀವತ್ಸ ಗೋಸ್ವಾಮಿ (4) ಬೇಗನೆ ವಿಕೆಟ್‌ ನೀಡಿದರು. ಇವರು ಔಟಾದಾಗ ತಂಡದ ಖಾತೆಯಲ್ಲಿದ್ದುದು ಕೇವಲ 59 ರನ್‌.

ಈ ಹಂತದಲ್ಲಿ ಈಶ್ವರನ್‌ ಮತ್ತು ಮಜುಂದಾರ್‌ ಸುಂದರ ಇನಿಂಗ್ಸ್‌ ಕಟ್ಟಿದರು. ಗುಜರಾತ್‌ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ಆರನೇ ವಿಕೆಟ್‌ ಪಾಲುದಾರಿಕೆಯಲ್ಲಿ 196ರನ್‌ ಸೇರಿಸಿ ಬಂಗಾಳ ತಂಡಕ್ಕೆ ಆಸರೆಯಾಯಿತು.

ಸಂಕ್ಷಿಪ್ತ ಸ್ಕೋರ್‌

ಬಂಗಾಳ: ಮೊದಲ ಇನಿಂಗ್ಸ್‌: 86 ಓವರ್‌ಗಳಲ್ಲಿ 6 ವಿಕೆಟ್‌ಗೆ 261 (ಅಭಿಮನ್ಯು ಈಶ್ವರನ್‌ 129, ಅನುಸ್ತಪ್‌ ಮಜುಂದಾರ್‌ 94; ಚಿಂತನ್‌ ಗಜ 75ಕ್ಕೆ2, ಈಶ್ವರ್‌ ಚೌಧರಿ 49ಕ್ಕೆ3, ಸಿದ್ದಾರ್ಥ್‌ ದೇಸಾಯಿ 67ಕ್ಕೆ1).

ಎರಡನೇ ಕ್ವಾರ್ಟರ್‌ ಫೈನಲ್‌

ಮಧ್ಯಪ್ರದೇಶ: ಪ್ರಥಮ ಇನಿಂಗ್ಸ್‌: 90 ಓವರ್‌ಗಳಲ್ಲಿ 6 ವಿಕೆಟ್‌ಗೆ 223 (ಅಂಕಿತ್‌ ದಾನೆ 59, ಶುಭಂ ಶರ್ಮಾ 17, ನಮನ್‌ ಓಜಾ 49, ದೇವೇಂದ್ರ ಬಂಡೇಲಾ 17, ಹರ್‌ಪ್ರೀತ್‌ ಸಿಂಗ್‌ ಬ್ಯಾಟಿಂಗ್‌ 47, ಅಂಕಿತ್‌ ಶರ್ಮಾ 13; ವಿಕಾಸ್‌ ಟೋಕಸ್‌ 24ಕ್ಕೆ1, ನವದೀಪ್‌ ಸೈನಿ 43ಕ್ಕೆ1, ವಿಕಾಸ್‌ ಮಿಶ್ರಾ 40ಕ್ಕೆ3, ಮನನ್‌ ಶರ್ಮಾ 34ಕ್ಕೆ1). (ದೆಹಲಿ ಎದುರಿನ ಪಂದ್ಯ).

ಮೂರನೇ ಕ್ವಾರ್ಟರ್‌ ಫೈನಲ್‌

ವಿದರ್ಭ: ಮೊದಲ ಇನಿಂಗ್ಸ್‌: 24 ಓವರ್‌ಗಳಲ್ಲಿ 3 ವಿಕೆಟ್‌ಗೆ 45 (ಫೈಜ್‌ ಫಜಲ್‌ 2, ಸಂಜಯ್‌ ರಾಮಸ್ವಾಮಿ 17, ವಾಸೀಂ ಜಾಫರ್‌ 12, ಗಣೇಶ್‌ ಸತೀಶ್‌ ಬ್ಯಾಟಿಂಗ್‌ 7, ಕರಣ್‌ ಶರ್ಮಾ ಬ್ಯಾಟಿಂಗ್‌ 7; ಕೆ.ಸಿ.ಅಕ್ಷಯ್‌ 14ಕ್ಕೆ2, ಎಂ.ಡಿ.ನಿದೀಶ್‌ 12ಕ್ಕೆ1). (ಕೇರಳ ವಿರುದ್ಧದ ಪಂದ್ಯ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT