ಶುಕ್ರವಾರ, ಮಾರ್ಚ್ 5, 2021
26 °C

ಎಸ್‌.ಆರ್‌.ಖಾನ್‌ ಸ್ಮಾರಕ ಟೆನಿಸ್‌: ಫೈನಲ್‌ಗೆ ಪ್ರಣವ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಸ್‌.ಆರ್‌.ಖಾನ್‌ ಸ್ಮಾರಕ ಟೆನಿಸ್‌: ಫೈನಲ್‌ಗೆ ಪ್ರಣವ್‌

ಬೆಂಗಳೂರು: ಎರಡನೇ ಶ್ರೇಯಾಂಕಿತ ಆಟಗಾರನ ಎದುರು ಅಮೋಘ ಸಾಮರ್ಥ್ಯ ತೋರಿದ ಪ್ರಣವ್‌ ಹೆಗ್ಗೆರೆ, ಎಸ್‌.ಆರ್‌.ಖಾನ್‌ ಸ್ಮಾರಕ ಟ್ರೋಫಿಗಾಗಿ ನಡೆಯುತ್ತಿರುವ 14 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ ಸೀರಿಸ್‌ ಟೆನಿಸ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ.

ಟಾಪ್‌ ಸ್ಪಿನ್‌ ಅಕಾಡೆಮಿಯ ಅಂಗಳದಲ್ಲಿ ಗುರುವಾರ ನಡೆದ ಬಾಲಕರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಪ್ರಣವ್‌ 3–6, 6–3, 6–2ರಲ್ಲಿ ರೋನಿನ್‌ ಲೋಟ್ಲಿಕರ್‌ ವಿರುದ್ಧ ಗೆದ್ದರು.

ದಿನದ ಇನ್ನೊಂದು ಪಂದ್ಯದಲ್ಲಿ ಅನ್ಮಯ್‌ ಯೋಗೇಶ್‌ ದೇವರಾಜ್‌ 6–4, 7–6ರ ನೇರ ಸೆಟ್‌ಗಳಿಂದ ಅಗ್ರಶ್ರೇಯಾಂಕಿತ ಆಟಗಾರ ಮೋನಿಲ್‌ ಲೋಟ್ಲಿಕರ್‌ ಅವರನ್ನು ಸೋಲಿಸಿದರು.

ಮಹಿಳೆಯರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಕರ್ನಾಟಕದ ವಿ.ಖುಷಿ ಮತ್ತು ಜಶಾ ಮುಖಾಮುಖಿಯಾಗಲಿದ್ದಾರೆ.

ಸಿಂಗಲ್ಸ್‌ ವಿಭಾಗದ ಮೊದಲ ಸೆಮಿಫೈನಲ್‌ನಲ್ಲಿ ಖುಷಿ 6–3, 0–6, 6–4ರಲ್ಲಿ ಸುಹಿತಾ ಮರೂರಿ ವಿರುದ್ಧ ಗೆದ್ದರು.

ನಾಲ್ಕರ ಘಟ್ಟದ ಇನ್ನೊಂದು ಹಣಾಹಣಿಯಲ್ಲಿ ಜಶಾ 4–6, 6–2, 6–3ರಲ್ಲಿ ಕರ್ನಾಟಕದವರೇ ಆದ ಎಸ್‌. ಆತ್ಮಿಕಾ ಅವರನ್ನು ಮಣಿಸಿದರು.

ಮೊದಲ ಸೆಟ್‌ನಲ್ಲಿ ಸೋತ ಜಶಾ ನಂತರ ಮೋಡಿ ಮಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.