6

‘ಓಜೋನ್’: ಐ.ಟಿ ಶೋಧ

Published:
Updated:

ಬೆಂಗಳೂರು: ಓಜೋನ್‌ ಡೆವಲಪರ್ ಗ್ರೂಪ್‌ ಮೇಲೆ ಆದಾಯ ತೆರಿಗೆ (ಐ.ಟಿ) ಅಧಿಕಾರಿಗಳು ಗುರುವಾರ ಶೋಧ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

‘ನಗರದ ಹಲಸೂರು ರಸ್ತೆಯಲ್ಲಿರುವ ಗ್ರೂಪ್‌ನ ಕಚೇರಿಗಳಿಗೆ ಬೆಳಿಗ್ಗೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.  ಪಣಜಿ, ಮುಂಬೈ, ಚೆನ್ನೈನಲ್ಲಿರುವ ಇದೇ ಕಂಪೆನಿಯ  ಶಾಖಾ ಕಚೇರಿಗಳಲ್ಲೂ ಶೋಧ ನಡೆದಿದೆ. ಒಟ್ಟು 25 ಕಡೆ ದಾಳಿ ನಡೆಸಲಾಗಿದೆ’ ಎಂದು ಐ.ಟಿ ಮೂಲಗಳು ತಿಳಿಸಿವೆ.

‘ತೆರಿಗೆ ವಂಚನೆ, ಆಘೋಷಿತ ಆಸ್ತಿ ಸಂಪಾದನೆ ಆರೋಪದಲ್ಲಿ ದಾಳಿ ನಡೆಸಲಾಗಿದೆ. ಮೂರು ದಿನಗಳ ಕಾಲ ಶೋಧ ಕಾರ್ಯ ಮುಂದುವರೆಯುವ ಸಾಧ್ಯತೆ ಇದೆ’ ಎಂದೂ ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry