4

ಹಾಕಿ: ಸೆಮಿಫೈನಲ್‌ಗೆ ಅರ್ಜೆಂಟೀನಾ, ಜರ್ಮನಿ

Published:
Updated:
ಹಾಕಿ: ಸೆಮಿಫೈನಲ್‌ಗೆ ಅರ್ಜೆಂಟೀನಾ, ಜರ್ಮನಿ

ಭುವನೇಶ್ವರ: ಆರಂಭದಿಂದಲೇ ಅಮೋಘ ಆಟವಾಡಿದ ಅರ್ಜೆಂಟೀನಾ ತಂಡದವರು ವಿಶ್ವ ಹಾಕಿ ಲೀಗ್ ಫೈನಲ್‌ನ ಸೆಮಿಫೈನಲ್‌ ಹಂತಕ್ಕೆ ಪ್ರವೇಶಿಸಿದರು. ಗುರುವಾರ ಸಂಜೆ ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಮೂರನೇ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಈ ತಂಡ ಬಲಿಷ್ಠ ಇಂಗ್ಲೆಂಡ್‌ ಎದುರು 3–2ರಿಂದ ಗೆದ್ದಿತು.

ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ಅರ್ಜೆಂಟೀನಾ 21ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿತು. ಲೂಕಾಸ್‌ ವಿಲಾ ಚೆಂಡನ್ನು ಗುರಿ ಸೇರಿಸಿದರು. 29ನೇ ನಿಮಿಷದಲ್ಲಿ ಮಥಾಯಸ್ ಪರಡೀಸ್‌ ಗೋಲು ಗಳಿಸಿ ತಂಡದ ವಿಶ್ವಾಸ ಹೆಚ್ಚಿಸಿದರು.

ಮರುಕ್ಷಣದಲ್ಲಿ ಡೇವಿಡ್ ಕಂಡೋನ್‌ ಅವರ ಮೂಲಕ ತಿರುಗೇಟು ನೀಡಿದ ಇಂಗ್ಲೆಂಡ್‌ ಸಮಬಲ ಸಾಧಿಸಲು ಪ್ರಯತ್ನಿಸಿತು. ಆದರೆ 34ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಬಿಟ್ಟುಕೊಟ್ಟು ಸಂಕಷ್ಟಕ್ಕೆ ಸಿಲುಕಿತು. ಈ ಅವಕಾಶವನ್ನು ಸದುಪ ಯೋಗ ಮಾಡಿಕೊಂಡ ಜುವಾನ್ ಗಿಲಾರ್ಡಿ, ಅರ್ಜೆಂಟೀನಾ ಜಯಕ್ಕೆ ವೇದಿಕೆ ಸಿದ್ಧಗೊಳಿಸಿದರು.

ಜರ್ಮನಿಗೆ ಗೆಲುವು: ಕೊನೆಯ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಜರ್ಮನಿ ಮತ್ತು ನೆದರ್ಲೆಂಡ್ಸ್ ತಂಡದವರು ಸಮಬಲದಿಂದ ಹೋರಾಡಿದರು.

ಆದರೆ ಪೆನಾಲ್ಟಿ ಶೂಟೌಟ್‌ನಲ್ಲಿ ಜರ್ಮನಿ 4–3ರಿಂದ ಗೆಲುವು ಸಾಧಿಸಿತು. ನಿಗದಿತ ಅವಧಿಯಲ್ಲಿ ಉಭಯ ತಂಡಗಳು ತಲಾ ಮೂರು ಗೋಲು ಗಳಿಸಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry