7

ಕಾರ್ಪೊರೇಟರ್‌ ಪತಿ ನ್ಯಾಯಾಂಗ ಬಂಧನಕ್ಕೆ

Published:
Updated:

ಬೆಂಗಳೂರು: ಜೆ.ಪಿ.ನಗರ ಕಲ್ಚರಲ್‌ ವೆಲ್‌ಫೇರ್‌ ಅಸೋಸಿಯೇಷನ್‌ ಉದ್ಯಾನದ ಖಾಲಿ ಜಾಗದಲ್ಲಿ ಕ್ರಿಕೆಟ್‌ ಆಡಿದರು ಎಂಬ ಕಾರಣಕ್ಕೆ ಟೆಕಿಗಳ ಮೇಲೆ ಹಲ್ಲೆ ನಡೆಸಿದ್ದ ಆರೋಪದಡಿ ಬಂಧಿಸಲಾಗಿರುವ ಸಾರಕ್ಕಿ ಕಾರ್ಪೊರೇಟರ್‌ ದೀಪಿಕಾ ಅವರ ಪತಿ ಮಂಜುನಾಥ್‌ ರೆಡ್ಡಿ ಹಾಗೂ ಏಳು ಮಂದಿಯನ್ನು ಡಿ. 21ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಸಾಫ್ಟ್‌ವೇರ್‌ ಎಂಜಿನಿಯರ್‌ ಸೈಯದ್‌ ಸಲ್ಮಾನ್‌ ಎಂಬುವರು ನೀಡಿದ್ದ ದೂರಿನನ್ವಯ ಜೆ.ಪಿ.ನಗರ ಪೊಲೀಸರು, ಮಂಜುನಾಥ್‌ ರೆಡ್ಡಿ ಹಾಗೂ ಅವರ ಬೆಂಬಲಿಗರಾದ ತೇಜಸ್‌, ರಾಮರೆಡ್ಡಿ, ಯಶವಂತ, ಸಂತೋಷ್‌, ಲಕ್ಷ್ಮಿನಾರಾಯಣ, ಹರೀಶ್‌ ಹಾಗೂ ಶಶಿಕುಮಾರ್‌ ಅವರನ್ನು ಬಂಧಿಸಿ ಬುಧವಾರ ರಾತ್ರಿ ನ್ಯಾಯಾಲಯದ ಎದುರು ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry