7
ಗುವಾಹಟಿಯಲ್ಲಿ ಇಂದು ನಾರ್ಥ್‌ ಈಸ್ಟ್‌ ಯುನೈಟೆಡ್‌ ಎಫ್‌ಸಿ ವಿರುದ್ಧ ಪಂದ್ಯ

ಬಿಎಫ್‌ಸಿಗೆ ಪುಟಿದೇಳುವ ವಿಶ್ವಾಸ

Published:
Updated:
ಬಿಎಫ್‌ಸಿಗೆ ಪುಟಿದೇಳುವ ವಿಶ್ವಾಸ

ಗುವಾಹಟಿ: ಉತ್ತಮ ಆರಂಭ ಕಂಡರೂ ನಂತರ ಸೋಲಿನ ಸುಳಿಗೆ ಸಿಲುಕಿದ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ತಂಡ ಪುಟಿದೇಳುವ ವಿಶ್ವಾದಲ್ಲಿ ಇಲ್ಲಿಗೆ ಬಂದಿಳಿದಿದೆ.

ಇಂಡಿಯನ್ ಸೂಪರ್ ಲೀಗ್‌ನ (ಐಎಸ್‌ಎಲ್) ಶುಕ್ರವಾರದ ಪಂದ್ಯದಲ್ಲಿ ಈ ತಂಡ ನಾರ್ಥ್ ಈಸ್ಟ್‌ ಯುನೈಟೆಡ್ ಎಫ್‌ಸಿ ವಿರುದ್ಧ ಸೆಣಸಲಿದೆ.

ಪ್ರಿಯತಮೆಯನ್ನು ಇತ್ತೀಚೆಗೆ ವರಿಸಿದ ತಂಡದ ನಾಯಕ ಸುನಿಲ್ ಚೆಟ್ರಿ ಈ ಪಂದ್ಯಕ್ಕೆ ಲಭ್ಯರಿದ್ದು ಗುರುವಾರ ಅಭ್ಯಾಸದಲ್ಲಿ ಪಾಲ್ಗೊಂಡಿದ್ದರು. ಇದು ತಂಡದ ಇತರ ಆಟಗಾರರ ಭರವಸೆಯನ್ನು ಹೆಚ್ಚಿಸಿದೆ.

ಮೊದಲ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಬಿಎಫ್‌ಸಿ ಕಳೆದ ಪಂದ್ಯದಲ್ಲಿ ಗೋವಾ ವಿರುದ್ಧ 3–4 ಗೋಲುಗಳಿಂದ ಸೋಲು ಕಂಡಿತ್ತು. ಜಯದ ಲಯಕ್ಕೆ ಮರಳಲು ಶುಕ್ರವಾರದ ಪಂದ್ಯದಲ್ಲಿ ತಂಡಕ್ಕೆ ಜಯ ಅನಿವಾರ್ಯ.

ಬೆಂಗಳೂರಿನ ತಂಡ ಎಲ್ಲಾ ವಿಭಾಗಗಳಲ್ಲೂ ಬಲಿಷ್ಠವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry