ಬುಧವಾರ, ಫೆಬ್ರವರಿ 24, 2021
23 °C

ರೊನಾಲ್ಡೊಗೆ ‘ಬಲೊನ್‌ ಡಿ ಓರ್‌ ’ ಗೌರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೊನಾಲ್ಡೊಗೆ ‘ಬಲೊನ್‌ ಡಿ ಓರ್‌ ’ ಗೌರವ

ಪ್ಯಾರಿಸ್‌: ಪೋರ್ಚುಗಲ್‌ನ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ವರ್ಷದ ಶ್ರೇಷ್ಠ ಫುಟ್‌ಬಾಲ್‌ ಆಟಗಾರನಿಗೆ ನೀಡುವ ಬಲೊನ್‌ ಡಿ ಓರ್‌ ಗೌರವಕ್ಕೆ ಭಾಜನರಾಗಿದ್ದಾರೆ.

ಐದನೇ ಸಲ ಪ್ರಶಸ್ತಿ ಗೆದ್ದುಕೊಂಡಿರುವ ರೊನಾಲ್ಡೊ, ಬಾರ್ಸಿಲೋನಾದ ಲಯೊನೆಲ್‌ ಮೆಸ್ಸಿ ದಾಖಲೆ ಸರಿಗಟ್ಟಿದ್ದಾರೆ. ಮೆಸ್ಸಿ ಕೂಡ ಇಷ್ಟೇ ಬಾರಿ ಪ್ರಶಸ್ತಿ ಜಯಿಸಿದ್ದರು.

ಹೋದ ಆವೃತ್ತಿಯ ಚಾಂಪಿಯನ್ಸ್‌ ಲೀಗ್‌ನಲ್ಲಿ ರೊನಾಲ್ಡೊ ಅತಿ ಹೆಚ್ಚು (42) ಗೋಲು ದಾಖಲಿಸಿದ್ದರು. ಜೊತೆಗೆ ರಿಯಲ್‌ ಮ್ಯಾಡ್ರಿಡ್‌ ತಂಡವನ್ನು ಪ್ರಶಸ್ತಿಯೆಡೆಗೆ ಮುನ್ನಡೆಸಿ ಅಪಾರ ಮೆಚ್ಚುಗೆ ಗಳಿಸಿದ್ದರು.

ರೊನಾಲ್ಡೊ ಪ್ರಶಸ್ತಿಯ ಹಾದಿಯಲ್ಲಿ ಮೆಸ್ಸಿ ಮತ್ತು ಬ್ರೆಜಿಲ್‌ನ ನೇಮರ್‌ ಅವರನ್ನು ಹಿಂದಿಕ್ಕಿದ್ದಾರೆ. ಇದಕ್ಕೂ ಮುನ್ನ ಅವರು 2008, 2013, 2014 ಮತ್ತು 2016ರಲ್ಲಿ ಟ್ರೋಫಿ ಎತ್ತಿಹಿಡಿದಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.