ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರೂವರೆ ವರ್ಷದ ಆಡಳಿತಾವಧಿಯಲ್ಲಿ ಪ್ರಚಾರಕ್ಕೆ ₹3,755 ಕೋಟಿ ವ್ಯಯಿಸಿದ ಮೋದಿ ನೇತೃತ್ವದ ಸರ್ಕಾರ

Last Updated 9 ಡಿಸೆಂಬರ್ 2017, 6:56 IST
ಅಕ್ಷರ ಗಾತ್ರ

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೂರೂವರೆ ವರ್ಷದ ಆಡಳಿತಾವಧಿಯಲ್ಲಿ ಪ್ರಚಾರಕ್ಕಾಗಿ ₹3,755 ಕೋಟಿ ವೆಚ್ಚ ಮಾಡಿದೆ.

ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಸಲ್ಲಿಸಿದ್ದ ಅರ್ಜಿಯಿಂದ ಈ ಮಾಹಿತಿ ಬಹಿರಂಗಗೊಂಡಿದೆ.

‘2014ರ ಏಪ್ರಿಲ್‌ನಿಂದ 2017ರ ಅಕ್ಟೋಬರ್‌ವರೆಗೆ ದೃಶ್ಯಮಾಧ್ಯಮ, ಮುದ್ರಣ ಮಾಧ್ಯಮ, ಆನ್‌ಲೈನ್, ಬಾಹ್ಯ ಪ್ರಚಾರ ಸೇರಿದಂತೆ ಎಲ್ಲಾ ಬಗೆಯ ಪ್ರಚಾರಕ್ಕೆ 37,54,06,23,616, ವ್ಯಯಿಸಿದೆ’ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮಾಹಿತಿ ನೀಡಿದೆ.

ಮಾಹಿತಿಯ ಪ್ರಕಾರ, ಕೇಂದ್ರ ಸರ್ಕಾರ ಸಮುದಾಯ ರೇಡಿಯೊ, ಡಿಜಿಟಲ್ ಸಿನಿಮಾ, ದೂರದರ್ಶನ, ಅಂತರ್ಜಾಲ, ಎಸ್‌ಎಂಎಸ್‌ ಮತ್ತು ಟಿವಿ ಸೇರಿದಂತೆ ದೃಶ್ಯ ಮಾಧ್ಯಮದ ಜಾಹೀರಾತುಗಳಿಗೆ ₹1,656 ಕೋಟಿ ಹಣವನ್ನು ಖರ್ಚು ಮಾಡಿದೆ.

ಇನ್ನು ಮುದ್ರಣ ಮಾಧ್ಯಮದಲ್ಲಿನ ಪ್ರಚಾರಕ್ಕೆ ₹1,698 ಕೋಟಿ, ಭಿತ್ತಿಪತ್ರಗಳು, ಪುಸ್ತಕಗಳು, ಕ್ಯಾಲೆಂಡರ್, ಹೋಲ್ಡಿಂಗ್ಸ್ ಸೇರಿದಂತೆ ಬಾಹ್ಯ ಪ್ರಚಾರಕ್ಕೆ ₹399ಕೋಟಿ ಹಣವನ್ನು ವ್ಯಯಿಸಿದೆ.

ನೋಯ್ಡಾದ ನಿವಾಸಿ, ಸಾಮಾಜಿಕ ಕಾರ್ಯಕರ್ತ ರಾಮವೀರ್ ತನ್ವೀರ್ ಮಾಹಿತಿ ನೀಡುವಂತೆ ಅರ್ಜಿ ಸಲ್ಲಿಸಿದ್ದರು.

2015ರಲ್ಲಿ ಆಮ್‌ ಆದ್ಮಿ ಪಕ್ಷದ ದೆಹಲಿ ಸರ್ಕಾರ ತನ್ನ ಸಾಧನೆಗಳ ಪ್ರಚಾರಕ್ಕೆ ₹526 ಕೋಟಿ ಖರ್ಚು ಮಾಡಿದ್ದನ್ನು ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳು ಟೀಕಿಸಿದ್ದವು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT