ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತೃಪೂರ್ಣ ಯೋಜನೆ ಅನುಷ್ಠಾನ ವಿಫಲ

Last Updated 9 ಡಿಸೆಂಬರ್ 2017, 6:36 IST
ಅಕ್ಷರ ಗಾತ್ರ

ಉಡುಪಿ: ‘ಉಡುಪಿ ಜಿಲ್ಲೆಯಲ್ಲಿ ಮಾತೃಪೂರ್ಣ ಯೋಜನೆ ಅನುಷ್ಠಾನ ಸಂಪೂರ್ಣವಾಗಿ ವಿಫಲವಾಗಿದೆ’ ಎಂದು ಉಡುಪಿ ಚಿಕ್ಕ ಮಂಗಳೂರು ಸಂಸದೆ ಶೋಭಾ ಕರದ್ಲಾಂಜೆ ಹೇಳಿದರು.

ಶುಕ್ರವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಅಭಿವೃದ್ದಿ, ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯ ಭೌಗೋಳಿಕ ವ್ಯವಸ್ಥೆ ಹಾಗೂ ನಾಗರೀಕರ ಮನೋಭಾವ ಅರಿಯದೇ ಈ ಯೋಜನೆ ಜಾರಿಗೆ ತರಲಾಗಿದೆ. ಈ ಹಿಂದೆ ಜಿಲ್ಲೆಯಲ್ಲಿ ಮಡಿಲು ಕಿಟ್‌ ಯೋಜನೆ ಅಡಿ ನೀಡಲಾಗುತ್ತಿದ್ದ ಕಿಟ್‌ಗೆ 15 ಸಾವಿರ ಫಲಾನುಭವಿಗಳಲ್ಲಿ 11 ಸಾವಿರ ಫಲಾನುಭವಿಗಳು ಪ್ರಯೋ ಜನ ಪಡೆಯುತ್ತಿದ್ದರು. ಆದರೆ, ಮಾತೃ ಪೂರ್ಣ ಯೋಜನೆಯಲ್ಲಿ 1,548 ಮಂದಿ ಮಾತ್ರ ಊಟ ಸ್ವೀಕರಿಸುತ್ತಿರುವುದು ಯೋಜನೆ ವಿಫಲವಾಗಲು ಕಾರಣ ಎಂದರು.

ಜಿಲ್ಲೆಯಲ್ಲಿ ಮಾತೃಪೂರ್ಣ ಯೋಜನೆಗೆ 7,500 ಗರ್ಭಿಣಿಯರು ಮತ್ತು 7,500 ಬಾಣಂತಿಯರು ಸೇರಿದಂತೆ ಒಟ್ಟು 15 ಸಾವಿರ ಫಲಾನುಭವಿಗಳು ಇದ್ದಾರೆ. ಅಕ್ಟೋಬರ್ ತಿಂಗಳಿನಲ್ಲಿ 890 ಗರ್ಭಿಣಿಯರು ಹಾಗೂ 658 ಬಾಣಂತಿರು ಮಾತ್ರ ಯೋಜನೆ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಉಪ ನಿರ್ದೇಶಕಿ ಗ್ರೇಶಿ ಗೋನ್ಸಾಲ್ವಿಸ್ ಮಾಹಿತಿ ನೀಡಿದರು.

ಸುರತ್ಕಲ್‌ನಿಂದ ಕುಂದಾಪುರ ದವರೆಗೆ ಹಾದು ಹೋಗಿರುವ ಚತು ಷ್ಪತ ಹೆದ್ದಾರಿ ಕಾಮಗಾರಿಯನ್ನು ಮಾರ್ಚ್ ಅಂತ್ಯದ ಒಳಗೆ ಪೂರ್ಣಗೊಳಿಸಲಾಗುವುದು. ಈಗಾಗಲೇ ಸುರತ್ಕಲ್‌ನಿಂದ ಕುಂದಾಪು ರದವರೆಗಿನ ಒಟ್ಟು 90 ಕಿ.ಮೀ ಚತುಷ್ಪತ ಹೆದ್ದಾರಿಯಲ್ಲಿ ಈಗಾಗಲೇ 82 ಕಿಮೀ ಕಾಮಗಾರಿ ಸಂಪೂರ್ಣವಾಗಿ ಮುಗಿದಿದೆ. ಉಳಿದ ಕಾಮಗಾರಿಯನ್ನು ಮಾರ್ಚ್ ಅಂತ್ಯದೊಳಗೆ ಮುಕ್ತಾಯಗೊಳಿಸಲಾಗುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿ ಸ್ಯಾಮ್ಸನ್ ವಿಜಯ ಕುಮಾರ್ ತಿಳಿಸಿದರು.

ಹೆದ್ದಾರಿ ಎರಡೂ ಬದಿಗಳಲ್ಲಿ ಸರ್ವಿಸ್ ರಸ್ತೆ ನಿರ್ಮಿಸಲಾಗುತ್ತಿದೆ, ಸಾರ್ವಜನಿಕರ ಬೇಡಿಕೆ ಪರಿಗಣಿಸಿ ಸರ್ವಿಸ್ ರಸ್ತೆ ನಿರ್ಮಾಣ ಮಾಡಲಾ ಗುತ್ತಿದೆ. ಕಾಮಗಾರಿ ಪ್ರಗತಿಯಲ್ಲಿರುವ ಎಲ್ಲ ಫ್ಲೈ ಓವರ್‌ಗಳನ್ನು ಇದೇ ಅವಧಿಯಲ್ಲಿ ನಿರ್ಮಾಣ ಮಾಡಲಾವುದು ಎಂದು ತಿಳಿಸಿದರು.

ರಸ್ತೆ ಕಾಮಗಾರಿ ನಡೆಯುವಲ್ಲಿ ಪೊಲೀಸ್ ರಕ್ಷಣೆ ನೀಡುವಂತೆ ಹೆದ್ದಾರಿ ಅಧಿಕಾರಿಗಳ ಮನವಿಗೆ ಉತ್ತರಿಸಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಯಾವ ನಿರ್ದಿಷ್ಟ ದಿನಾಂಕ ಮತ್ತು ಸ್ಥಳದದಲ್ಲಿ ರಕ್ಷಣೆ ಅಗತ್ಯವಿದೆ ಎಂದು ಬಗ್ಗೆ ಪತ್ರ ಬರೆದಲ್ಲಿ, ಪೊಲೀಸ್ ರಕ್ಷಣೆ ನೀಡುವಂತೆ ಆದೇಶ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ಕೇಂದ್ರ ರಸ್ತೆ ಕಾಮಗಾರಿಯಲ್ಲಿ, ತೀರ್ಥಹಳ್ಳಿ ಕಮರಳ್ಳಿ ರಸ್ತೆ ಕಾಮಗಾರಿಗೆ ₹110 ಕೋಟಿ ಹಾಗೂ ಮಲ್ಪೆ–ಪರ್ಕಳ ರಸ್ತೆ ಕಾಮಗಾರಿಗೆ ₹110 ಕೋಟಿ ಮೊತ್ತದ ಡಿಪಿಆರ್ ಅಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಮಾಹಿತಿ ನೀಡಿದರು.
ಕೇಂದ್ರ ರಸ್ತೆ ಕಾಮಗಾರಿ ನಿರ್ಮಿಸುವ ಸ್ಥಳದಲ್ಲಿ ಕಾಮಗಾರಿ ಗುತ್ತಿಗೆದಾರ ಹಾಗೂ ಕಾಮಗಾರಿ ಮೊತ್ತದ ಕುರಿತು ಮಾಹಿತಿ ಫಲಕ ಅಳವಡಿಸುವಂತೆ ಸಂಸದೆ ಶೋಭಾ ಕರದ್ಲಾಂಜೆ ಸೂಚನೆ ನೀಡಿದರು.

ಹೊಸ ಪಡಿತರ ಕಾರ್ಡ್‌ಗಾಗಿ 8,112 ಅರ್ಜಿ ಬಂದಿದ್ದು, 6,932 ಕಾರ್ಡ್‌ಗಳು ಈಗಾಗಲೇ ಮುದ್ರಣವಾಗಿ ಅಂಚೆ ಮೂಲಕ ಫಲಾನುಭವಿಗಳಿಗೆ ಕಳುಹಿಸಲಾಗಿದೆ. ಉಳಿದ ಅರ್ಜಿಗಳನ್ನು ಶೀಘ್ರವೇ ವಿಲೇವಾರಿ ಮಾಡಲಾಗುವುದು ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅಧಿಕಾರಿಗಳು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಾಪಶಿ ಉಪಸ್ಥಿತರಿದ್ದರು.

* * 

ಡಿಸೆಂಬರ್ 20ರ ಒಳಗೆ ಬ್ಯಾಂಕ್‌ಗಳು ದತ್ತು ಪಡೆದ ಗ್ರಾಮಗಳಲ್ಲಿ ಡಿಜಿಟಲ್ ವ್ಯವಹಾರ ನಿರ್ವಹಿಸಲು ಅಸಕ್ತಿ ವಹಿಸದ ಬ್ಯಾಂಕ್‌ಗಳಿಂದ ಗ್ರಾಮ ಪಂಚಾಯಿತಿ ಖಾತೆಯನ್ನು ಇತರೆ ಬ್ಯಾಂಕ್‌ಗಳಿಗೆ ವರ್ಗಾಯಿಸಿ.
ಶೋಭಾ ಕರದ್ಲಾಂಜೆ, ಸಂಸದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT