ಗುರುವಾರ , ಫೆಬ್ರವರಿ 25, 2021
24 °C

ಕಾಲುವೆಗಳಲ್ಲಿ ಗಿಡಗಂಟಿಗಳು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಲುವೆಗಳಲ್ಲಿ ಗಿಡಗಂಟಿಗಳು...

ಸವದತ್ತಿ: ತಾಲ್ಲೂಕಿನ ಹೊಸವಾಳ ಹಾಗೂ ಗೊರವನಕೊಳ್ಳ ವ್ಯಾಪ್ತಿಯ 2ನೇ ಉಪ ಕಾಲುವೆಗಳು ಸಂಪೂರ್ಣ ಹದಗೆಟ್ಟಿವೆ. ಗಿಡಗಳು ಬೆಳೆದಿದ್ದು, ನೀರು ಸಲಿಸಾಗಿ ಹರಿಯದೇ ಇರುವುದರಿಂದ ಕೊನೆಯ ಭಾಗದ ರೈತರು ಕಂಗಾಲಾಗಿದ್ದಾರೆ.

‘ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಕಾಲುವೆಗಳು ಈಗಾಗಲೇ ಕಿತ್ತು ಹೋಗಿವೆ. ಇಡೀ ಕಾಲುವೆ ತುಂಬ  ಮಣ್ಣು ತುಂಬಿದೆ. ಮುಳ್ಳಿನ ಗಿಡಗಳು ಬೆಳೆದಿವೆ. ಕಾಲುವೆ ಸ್ವಚ್ಛಗೊಳಿಸದೇ ಅವಸರದಿಂದ ಕಾಲುವೆಗೆ ನೀರು ಹರಿಸಲಾಗಿದೆ. ಇದರಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ’ ಎಂದು ರೈತರು ದೂರಿದ್ದಾರೆ.

2011–12ನೇ ಸಾಲಿನಲ್ಲಿ ₹40 ಲಕ್ಷ ಹಣದಲ್ಲಿ ನಿರ್ಮಾಣವಾದ ಕಾಲುವೆಗಳು ಕಳಪೆ ಕಾಮಗಾರಿಯಿಂದಾಗಿ ಹಾಳಾಗಿವೆ. ಅದನ್ನು ಸ್ವಚ್ಛಗೊಳಿಸಬೇಕು. ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದು ಗೊರವನಕೊಳ್ಳದ ರೈತ ಕಿರಣ ಇನಾಮದಾರ ತಿಳಿಸಿದರು.

ಇನ್ನಾದರೂ ಕಾಲುವೆ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು. ರೈತರಿಗೆ ಅನುಕೂಲ ಮಾಡಿಕೊಡಬೇಕು ಎನ್ನುವುದು ರೈತರ ಒಕ್ಕೊರಲ ಒತ್ತಾಯ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.