ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ: ರವಿ ಬೆಳಗೆರೆ ಫಾರ್ಮ್ ಹೌಸ್ ಮೇಲೆ ಸಿಸಿಬಿ ಪೊಲೀಸರ ದಾಳಿ

Last Updated 9 ಡಿಸೆಂಬರ್ 2017, 11:43 IST
ಅಕ್ಷರ ಗಾತ್ರ

ಜೊಯಿಡಾ: ಸಹೋದ್ಯೋಗಿ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ್ದ ಆರೋಪದ ಮೇಲೆ ‘ಹಾಯ್ ಬೆಂಗಳೂರು’ ಪತ್ರಿಕೆಯ ಸಂಸ್ಥಾಪಕ ರವಿ ಬೆಳಗೆರೆ ಅವರನ್ನು ಬೆಂಗಳೂರು ಸಿಸಿಬಿ ಪೊಲೀಸರು ಶುಕ್ರವಾರ ಬಂಧಿಸಿದ ಬೆನ್ನಲ್ಲೆ ಹೆಚ್ಚಿನ ದಾಖಲೆ ಹುಡುಕುವ ಹಿನ್ನೆಲೆಯಲ್ಲಿ ಶನಿವಾರ ಜೊಯಿಡಾ ತಾಲ್ಲೂಕಿನ ಜಗಲ್ಬೇಟ್ ಬಳಿ ಬರ್ಬೂಸಾ ಗ್ರಾಮದಲ್ಲಿರುವ ಅವರ ಫಾರ್ಮ್ ಹೌಸ್ ಮೇಲೆ ಸಿಸಿಬಿ ತಂಡ ದಾಳಿ ಮಾಡಿದೆ. ಆದರೆ, ಇಲ್ಲಿ ಯಾವುದೆ ದಾಖಲೆಗಳು ಲಭ್ಯವಾಗಿಲ್ಲ ಎನ್ನಲಾಗಿದೆ.

ಸುಮಾರು 1.30ರ ವೇಳೆಗೆ ಫಾರ್ಮ ಹೌಸ್‌ಗೆ ಬಂದ ಐದು ಪಿಎಸ್ಐ ಒಳಗೊಂಡ ತಂಡ ಆವರಣದ ಗೇಟ್‌ಗೆ ಬೀಗ ಹಾಕಿ ಪರಿಶೀಲನೆ ನಡೆಸಿದೆ. ಸುಫಾರಿ ಸಂಬಂಧ ಏನಾದರೂ ದಾಖಲೆ ಸಿಗಬಹುದು ಎನ್ನುವ ಹಿನ್ನೆಲೆಯಲ್ಲಿ ದಾಳಿ ಮಾಡಿದ್ದಾರೆ.

ಸುಮಾರು ಆರು ಎಕರೆ ವಿಸ್ತೀರ್ಣದ ಫಾರ್ಮ್‌ನಲ್ಲಿ ಒಂದು ಬೃಹತ್ ಮನೆಯಿದೆ. ಸುತ್ತ ಖಾಲಿ ಜಾಗ ಕೂಡ ಇದೆ. ಈ ಪಾರ್ಮ್‌ಅನ್ನು ಬೆಳಗೆರೆ 10 ವರ್ಷದ ಹಿಂದೆ ಖರೀದಿಸಿದ್ದರು. ಅಲ್ಲಿಂದ ಅವರು ತಿಂಗಳಿಗೊಮ್ಮೆಯಾದರೂ ಇಲ್ಲಿಗೆ ಬಂದು ಹೋಗುತ್ತಿದ್ದರು. ದಂಗೆಯ ದಿನಗಳು ಎಂಬ ಪುಸ್ತಕವನ್ನ ಬರೆದಿದ್ದರು ಕೂಡ. ಇಲ್ಲಿ ಹೆಚ್ಚಾಗಿ ಪಾತ್ರೆ, ಪಗಡೆ, ಕೃಷಿ ಪರಿಕರ ಬಿಟ್ಟು ಹೆಚ್ಚಿನದೇನೂ ಇಲ್ಲ ಎಂಬ ಮಾತಿದೆ. ಆದರೂ ಅಧಿಕಾರಿಗಳಿಂದ ಪರಿಶೀಲನೆ ನಡೆದಿದೆ.

ಆರು ಜನ ಕೂಲಿಯವರು ಈ ಫಾರ್ಮ್‌ನಲ್ಲಿ ಕೆಲಸಕ್ಕೆ ಇದ್ದಾರೆ. ಅವರಿಂದ ಕೂಡ ಹೆಚ್ಚಿನ ಮಾಹಿತಿ ಪಡೆಯಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಆದರೆ, ಇಲ್ಲಿಗೆ ಭೇಟಿ ನೀಡಿರುವ ಸಿಸಿಬಿ ತಂಡಕ್ಕೆ ಯಾವುದೆ ದಾಖಲೆಗಳು ಲಭ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT