ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ದರದಲ್ಲಿ ಬದಲಾವಣೆ?

Last Updated 9 ಡಿಸೆಂಬರ್ 2017, 19:57 IST
ಅಕ್ಷರ ಗಾತ್ರ

ಮುಂಬೈ: ಜಿಎಸ್‌ಟಿಯಲ್ಲಿ ಶೇ 28ರ ತೆರಿಗೆ ದರದಲ್ಲಿ ಇರುವ ಇನ್ನೂ ಕೆಲವು ಸರಕುಗಳ ತೆರಿಗೆ ದರ ತಗ್ಗಿಸವ ಬಗ್ಗೆ ಸರ್ಕಾರ ಸುಳಿವು ನೀಡಿದೆ.

ನವೆಂಬರ್‌ 10ರಂದು ನಡೆದ ಸಭೆಯಲ್ಲಿ 200ಕ್ಕೂ ಅಧಿಕ ಸರಕುಗಳ ಮೇಲಿನ ತೆರಿಗೆ ದರ ತಗ್ಗಿಸಲಾಗಿತ್ತು. ಒಟ್ಟಾರೆ 228 ಸರಕುಗಳು ಶೇ 28ರ ತೆರಿಗೆ ದರದಲ್ಲಿ ಇದ್ದವು. ಸದ್ಯ 50 ಸರಕುಗಳು ಮಾತ್ರವೇ ಗರಿಷ್ಠ ತೆರಿಗೆ ದರದ (ಶೇ 28) ವ್ಯಾಪ್ತಿಯಲ್ಲಿದೆ.

ಗರಿಷ್ ತೆರಿಗೆ ಹಂತದಲ್ಲಿದ್ದ  ‌178 ದಿನ ಬಳಕೆಯ ಸರಕುಗಳನ್ನು ಶೇ 18ರ ತೆರಿಗೆ ಹಂತದ ವ್ಯಾಪ್ತಿಗೆ ತರಲಾಗಿದೆ.

‘ಕೇಂದ್ರ ಸರ್ಕಾರ ಶೇ 28ರ ತೆರಿಗೆ ದರವನ್ನು ಪರಾಮರ್ಶೆಗೆ ಒಳಪಡಿಸಲಿದೆ’ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಶಿವ ಪ್ರತಾಪ್‌ ಶುಕ್ಲಾ ತಿಳಿಸಿದ್ದಾರೆ.

ಗರಿಷ್ಠ ಮಟ್ಟದ ಪ್ರಗತಿ (ವಡೋದರಾ ವರದಿ): ‘ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತಿರುವ ಕೆಲವು ರಚನಾತ್ಮಕ ಸುಧಾರಣಾ ಕ್ರಮಗಳಿಂದಾಗಿ ಭಾರತದ ಆರ್ಥಿಕತೆ ಗರಿಷ್ಠ ಮಟ್ಟದ ಪ್ರಗತಿ ಹಾದಿಯಲ್ಲಿದೆ’ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ.

‘ಸೂಕ್ತ ಸಂದರ್ಭದಲ್ಲಿ ನಮ್ಮ ಸರ್ಕಾರ ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡಿದೆ. ದೀರ್ಘ ಅವಧಿಯಲ್ಲಿ ಆರ್ಥಿಕ ಪ್ರಗತಿಗೆ ಅನುಕೂಲ ಆಗುವಂತೆ ನೋಟು ರದ್ದತಿ ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೊಳಿಸಲಾಗಿದೆ’ ಎಂದು ಜೇಟ್ಲಿ ಅವರು ತಿಳಿಸಿದ್ದಾರೆ.

‘ದೇಶದ ಅರ್ಥ ವ್ಯವಸ್ಥೆಯ ಬಗ್ಗೆ ಜಾಗತಿಕ ಮಟ್ಟದಲ್ಲಿ ಸಕಾರಾತ್ಮಕ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ವಿಶ್ವ ಬ್ಯಾಂಕ್‌, ಐಎಂಎಫ್‌ ಮತ್ತು ಮೂಡೀಸ್‌ ವರದಿಗಳು ಭಾರತದ ಬಗೆಗಿನ ಹೂಡಿಕೆದಾರರ ವಿಶ್ವಾಸವನ್ನು ಇನ್ನಷ್ಟು ಬಲಗೊಳಿಸಿದೆ’ ಎಂದು ಜೇಟ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT