ಬುಧವಾರ, ಮಾರ್ಚ್ 3, 2021
23 °C

ಮೂರು ತಿಂಗಳಿಂದ ವೈದ್ಯರು ಇಲ್ಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂರು ತಿಂಗಳಿಂದ ವೈದ್ಯರು ಇಲ್ಲ!

ಬೆಂಗಳೂರು: ಹೆಸರಘಟ್ಟ ಸಮೀಪದ ಸೊಂಡೆಕೊಪ್ಪ ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೂರು ತಿಂಗಳನಿಂದ ವೈದ್ಯರಿಲ್ಲ!

‘ಮೂರು ತಿಂಗಳಿನಿಂದ ಇಲ್ಲಿ ವೈದ್ಯರಿಲ್ಲ. ನರ್ಸಗಳೇ ಮಾತ್ರೆ, ಇಂಜೆಕ್ಷನ್ ನೀಡುತ್ತಿದ್ದಾರೆ. ಹೆಚ್ಚಿನ ಸೇವೆ ಬೇಕಾದರೆ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಎನ್ನುತ್ತಿದ್ದಾರೆ’ ಎಂದು ಗ್ರಾಮಸ್ಥರು ದೂರಿದರು.

ಈ ಗ್ರಾಮದಲ್ಲಿ 1955ರಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಲಾಗಿದೆ. ಅಲ್ಲಿಂದ ಇಲ್ಲಿಯವರೆಗೆ ಆರೋಗ್ಯ ಕೇಂದ್ರದ ನವೀಕರಣ ಮಾಡಿಲ್ಲ. ನುರಿತ ವೈದ್ಯರನ್ನೂ ನೇಮಿಸಿಲ್ಲ’ ಎಂದರು.

ಇಲ್ಲಿನ ಗ್ರಾಮಸ್ಥರು 6 ಕಿ.ಮೀ ದೂರದ ನೆಲಮಂಗಲಕ್ಕೆ ಹೋಗಿ ಚಿಕಿತ್ಸೆ ಪಡೆಯಬೇಕಾದ ಸ್ಥಿತಿ ಇದೆ. ಸರ್ಕಾರ ಇದನ್ನು ಗಮನಿಸದೇ ಮೂರು ತಿಂಗಳು ಕಳೆದರೂ ವೈದ್ಯರನ್ನು ಸೇವೆಗೆ ನೇಮಿಸದೇ ಇರುವುದು ಖಂಡನೀಯ’ ಎಂದು ಗ್ರಾಮದ ಹಿರಿಯರಾದ ಮುತ್ತಣ್ಣ ತಿಳಿಸಿದರು.

ಸೊಂಡೆಕೊಪ್ಪದಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾ.ಸರಿತಾ ಅವರನ್ನು ನಾಗರಭಾವಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆ ಮಾಡಲಾಯಿತು. ಅವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಇನ್ನೂ ಯಾರನ್ನು ನೇಮಿಸಿಲ್ಲ. ವಾರಕ್ಕೆ ಎರಡು ದಿನ ವೈದ್ಯರು ಬಂದು ಹೋಗುತ್ತಿದ್ದಾರೆ.

ಯಲಹಂಕ ತಾಲ್ಲೂಕು ವೈದ್ಯಾಧಿಕಾರಿ ಡಾ. ರಮೇಶ್ ಬಾಬು,‘ಸ್ನೇಹಲತಾ ಎನ್ನುವರನ್ನು ಸೊಂಡೆಕೊಪ್ಪ ಆಸ್ಪತ್ರೆಗೆ ನೇಮಿಸಲಾಗಿದೆ. ಶೀಘ್ರದಲ್ಲಿ ಅವರು ಕರ್ತವ್ಯಕ್ಕೆ ಹಾಜರಾಗುತ್ತದೆ’ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.