ಭಾನುವಾರ, ಮಾರ್ಚ್ 7, 2021
28 °C

ಅತಿ ಕಿರಿಯ ತಬಲಾ ವಾದಕನಿಗೆ ಗಿನ್ನಿಸ್ ಗರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅತಿ ಕಿರಿಯ ತಬಲಾ ವಾದಕನಿಗೆ ಗಿನ್ನಿಸ್ ಗರಿ

ಗಿನ್ನಿಸ್‌ ದಾಖಲೆ ಪುಟದಲ್ಲಿ ಹೆಸರು ಸೇರಬೇಕೆಂದರೆ ಸಾಕಷ್ಟು ಸಾಧನೆ ಮಾಡಬೇಕು. ಅದಕ್ಕೆ ಹೆಚ್ಚು ಶ್ರಮಪಡಬೇಕು. ಹಲವು ವರ್ಷ ಶ್ರಮಿಸಿದರೂ ಗಿನ್ನಿಸ್ ದಾಖಲೆ ಹಲವರಿಗೆ ಇನ್ನೂ ಸಾಧ್ಯವಾಗಿಲ್ಲ. ಆದರೆ ಈ ಬಾಲಕ  ಆರು ವರ್ಷ ತುಂಬುವುದಕ್ಕೂ ಮೊದಲೇ ಗಿನ್ನಿಸ್‌ ವಿಶ್ವದಾಖಲೆ ನಿರ್ಮಿಸಿದ್ದಾನೆ.

ಮುಂಬೈನ ತೃಪ್ತರಾಜ್‌ ಪಾಂಡ್ಯ ಎರಡು ವರ್ಷದವನಿದ್ದಾಗಲೇ ತಬಲಾ ಬಾರಿಸುವುದನ್ನು ಅಭ್ಯಾಸ ಮಾಡಿದ. ಆಗಲೇ ಮುಂಬೈನ ಸೊಮಯಾ ಕಾಲೇಜಿನಲ್ಲಿ ಮೊದಲ

ಪ್ರದರ್ಶನ ನೀಡಿದ. ಮೂರರ ವಯಸ್ಸಿನಲ್ಲೇ ಆಲ್‌ ಇಂಡಿಯಾ ರೇಡಿಯೋದಲ್ಲಿ ತಬಲಾ ವಾದನದ ಕಾರ್ಯಕ್ರಮ ನೀಡಿ, ಎಲ್ಲರ ಮೆಚ್ಚುಗೆ ಗಳಿಸಿದ.

ನಾಲ್ಕು ವರ್ಷದವನಿದ್ದಾಗ ದೂರದರ್ಶನದಲ್ಲಿ ಪ್ರದರ್ಶನ ನೀಡಿ ಎಲ್ಲರನ್ನೂ ಆಚ್ಚರಿಗೊಳಿಸಿದ. ಆರು ವರ್ಷ ತುಂಬುವಷ್ಟರಲ್ಲಿ ವಿಶ್ವದ ಅತಿ ಕಿರಿಯ ತಬಲಾ ವಾದಕ ಎಂದು ಗಿನ್ನಿಸ್‌ ದಾಖಲೆಗೆ ಸೇರಿದ್ದಾನೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.