ಜಾನಿ ಜಾನಿ ಯೆಸ್ ಪಾಪಾ ಎನ್ನುತ್ತಿದ್ದಾರೆ ದುನಿಯಾ ವಿಜಯ್

ನಟ ದುನಿಯಾ ವಿಜಯ್ ಅವರ ‘ದುನಿಯಾ ಟಾಕೀಸ್’ ಮೂಲಕ ನಿರ್ಮಾಣ ಆಗುತ್ತಿರುವ ‘ಜಾನಿ ಜಾನಿ ಯೆಸ್ ಪಾಪಾ’ ಸಿನಿಮಾದ ಚಿತ್ರೀಕರಣ ಬೆಂಗಳೂರು ಸಮೀಪದ ನೆಲಮಂಗಲದ ಮೋಹನ್ ಬಿ. ಕೆರೆ ಸ್ಟುಡಿಯೊದಲ್ಲಿ ನಡೆಯುತ್ತಿದೆ. ಅಲ್ಲಿ ಸಿನಿಮಾದ ಅಗತ್ಯಗಳಿಗೆ ತಕ್ಕಂತೆ ಸೆಟ್ ಹಾಕಲಾಗಿದೆ.
ಈ ಸಿನಿಮಾದಲ್ಲಿ ಆ್ಯಕ್ಷನ್ ಹಾಗೂ ಹಾಸ್ಯದ ದೃಶ್ಯಗಳು ಇರಲಿವೆ, ಈಗ ಸ್ಟುಡಿಯೋದಲ್ಲಿ ಹಾಡುಗಳ ಚಿತ್ರೀಕರಣ ನಡೆಯುತ್ತಿದೆಯಂತೆ. ಇದುವರೆಗೆ ಶೇ 50ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆಯಂತೆ. ಇಲ್ಲಿಯವರೆಗೆ ಅರವತ್ತು ದಿನಗಳ ಚಿತ್ರೀಕರಣ ನಡೆದಿದೆ. ಸಿನಿಮಾ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ಈಚೆಗೆ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಸ್ವತಃ ವಿಜಯ್ ಈ ಮಾಹಿತಿ ನೀಡಿದರು. ವಿಜಯ್ ಮತ್ತು ರಂಗಾಯಣ ರಘು ಅಭಿನಯಿಸಿರುವ ಹಾಡುಗಳ ಚಿತ್ರೀಕರಣ ಅಲ್ಲಿ ನಡೆದಿದೆ. ಇವರಿಬ್ಬರೂ ಎಂಟು ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.
ಜನವರಿಯಲ್ಲಿ ಹಾಡುಗಳ ಸಿ.ಡಿ. ಬಿಡುಗಡೆ, ಮುಂದಿನ ದಿನಗಳಲ್ಲಿ ಪ್ರಚಾರದ ಕೆಲಸವನ್ನು ಶುರುಮಾಡುವ ಯೋಜನೆ ಸಿನಿಮಾ ತಂಡದ್ದು. ‘ಜಾನಿ ಮೇರಾ ನಾಮ್’ ಚಿತ್ರದ ಮುಂದುವರಿದ ಭಾಗ ಇದು, ಆ ಸಿನಿಮಾದಲ್ಲಿ ಅಭಿನಯಿಸಿದವರೇ ಇದರಲ್ಲಿಯೂ ಇರುತ್ತಾರೆ. ರಚಿತಾ ರಾಮ್, ಬಾಲಕ ಹೇಮಂತ್ ಚಿತ್ರತಂಡ ಸೇರಿಕೊಂಡಿದ್ದಾರೆ. ಅಚ್ಯುತ್ ಕುಮಾರ್, ನಾಯಕಿಯ ತಂದೆ ಪಾತ್ರಕ್ಕೆ ಜೀವ ತುಂಬಿದ್ದಾರೆ ಎಂದರು ನಿರ್ದೇಶಕ ಪ್ರೀತಂ ಗುಬ್ಬಿ.
ಸಿನಿಮಾಕ್ಕೆ ಅಗತ್ಯವಿರುವ ಸೆಟ್‌ನ ನಕ್ಷೆಯನ್ನು ತೋರಿಸಿದಾಗ, ಇದು ಸಾಧ್ಯವೇ ಎಂದು ವಿಜಯ್ ಪ್ರಶ್ನಿಸಿದ್ದರಂತೆ. ಸೆಟ್ ನಿರ್ಮಾಣ ಸಾಧ್ಯವಾಗಿದ್ದನ್ನು ಕಂಡು ಖುಷಿಪಟ್ಟರಂತೆ. ಈ ವಿಷಯ ತಿಳಿಸಿದವರು ಮೋಹನ್ ಬಿ. ಕೆರೆ. ಸಂಗೀತ ನಿರ್ದೇಶನ ಅಜನೀಶ್ ಲೋಕನಾಥ್ ಅವರದ್ದು. ‘ಇಲ್ಲಿ ತಾಲೀಮು ನಡೆಸಲು ಅವಕಾಶ ಇದೆ. ಸೆಟ್‌ನಲ್ಲಿ ಸುಲಭವಾಗಿ ಅಭಿನಯಿಸಬಹುದು’ ಎನ್ನುವುದು ರಘು ಅವರ ಮಾತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.