ಮಂಗಳವಾರ, ಮಾರ್ಚ್ 9, 2021
31 °C

ಸಾಬರಮತಿ ನದಿಯಲ್ಲಿ ಜಸ್‌ಪ್ರೀತ್‌ ಬೂಮ್ರಾ ತಾತನ ಮೃತದೇಹ ಪತ್ತೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಸಾಬರಮತಿ ನದಿಯಲ್ಲಿ ಜಸ್‌ಪ್ರೀತ್‌ ಬೂಮ್ರಾ ತಾತನ ಮೃತದೇಹ ಪತ್ತೆ

ಅಹಮದಾಬಾದ್‌: ಭಾರತ ಕ್ರಿಕೆಟ್‌ ತಂಡದ ವೇಗಿ ಜಸ್‌ಪ್ರೀತ್‌ ಬೂಮ್ರಾ ಅವರ ತಾತ ಸಂತೋಕ್​ ಸಿಂಗ್​ ಬೂಮ್ರಾ ಅವರ ಮೃತ ದೇಹ ಭಾನುವಾರ ಸಾಬರಮತಿ ನದಿಯಲ್ಲಿ ಪತ್ತೆಯಾಗಿದೆ.

84 ವರ್ಷದ ಸಂತೋಕ್​ ಸಿಂಗ್​ ಬೂಮ್ರಾ ಅವರು ಶುಕ್ರವಾರದಿಂದ ಕಾಣೆಯಾಗಿರುವ ಬಗ್ಗೆ ಕುಟುಂಬ ಸದಸ್ಯರು ದೂರು ನೀಡಿದ್ದರು.

ಡಿ.5ರಂದು ಜಸ್‌ಪ್ರೀತ್‌ ಬೂಮ್ರಾ ಹುಟ್ಟುಹಬ್ಬದ ದಿನ ಅವರನ್ನು ಭೇಟಿಯಾಗಲು ಅಹಮದಾಬಾದ್​ಗೆ ಬಂದಿದ್ದರು. ಆದರೆ, ಅವರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಬಳಿಕ, ಡಿ.8ರಿಂದ ಸಂತೋಕ್​ ಸಿಂಗ್​ ಕಾಣೆಯಾಗಿದ್ದರು.

ಡಿ.8ರಂದು ಜಾರ್ಖಂಡ್‌ನಲ್ಲಿರುವ ಬಲವಿಂದರ್​ ಸಿಂಗ್​ಗೆ ಕರೆ ಮಾಡಿದ್ದ ಸಂತೋಕ್ ಸಿಂಗ್​, ‘ನನ್ನ ಮೃತ ಪತ್ನಿಯನ್ನು ಭೇಟಿ ಮಾಡಲು ಹೊರಟಿರುವುದಾಗಿ’ ತಿಳಿಸಿದ್ದರು.

‘ನಮ್ಮ ತಂದೆ ಜಸ್‌ಪ್ರೀತ್‌ ಬೂಮ್ರಾ ಅವರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಜತೆಗೆ, ಜಸ್‌ಪ್ರೀತ್‌ನ ಫೋನ್‌ ನಂಬರ್‌ ಕೊಡಲು ಅವರು ತಾಯಿ ದಲ್ಜಿತ್​ ಕೌರ್​ ನಿರಾಕರಿಸಿದ್ದರು. ಇವೆಲ್ಲ ಸಂಗತಿಗಳಿಂದ ಬೇಸರಗೊಂಡಿದ್ದರು’ ಎಂದು ಸಂತೋಕ್​ ಸಿಂಗ್‌ ಅವರ ಮಗಳು​ ರಾಜಿಂದರ್‌ ಕೌರ್‌ ಬೂಮ್ರಾ ತಿಳಿಸಿದ್ದಾರೆ.

ಸದ್ಯ ನಡೆಯುತ್ತಿರುವ ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ ಜಸ್‌ಪ್ರೀತ್‌ ಬೂಮ್ರಾ ಸ್ಥಾನ ಪಡೆದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.