ಕರ್ನಾಟಕದ ಚೇತನ್, ನಿತಿನ್‌ಗೆ ಸ್ಥಾನ

ಬೆಂಗಳೂರು: ಕರ್ನಾಟಕದ ಸಿ. ಚೇತನ್ ಹಾಗೂ ನಿತಿನ್ ಅವರು ಡಿಸೆಂಬರ್ 13ರಿಂದ 17ರವರೆಗೆ ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆಯುವ ಎರಡನೇ ಏಷ್ಯನ್ ನೆಟ್‌ಬಾಲ್ ಚಾಂಪಿಯನ್‌ಷಿಪ್‌ಗಾಗಿ ಪ್ರಕಟಗೊಂಡಿರುವ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ನಿತಿನ್ ಅವರು ಉಜಿರೆಯ ಎಸ್‌ಡಿಎಮ್ ಕಾಲೇಜಿನಲ್ಲಿ ಹಾಗೂ ಚೇತನ್ ಬೆಂಗಳೂರಿನ ಸೇಂಟ್ ತೆರೆಸಾ ಕಾಲೇಜಿನಲ್ಲಿ ಓದುತ್ತಿದ್ದಾರೆ. ಒಂದು ತಿಂಗಳು ಭಾರತ ತಂಡದ ಆಟಗಾರರು ನವದೆಹಲಿಯಲ್ಲಿ ಅಭ್ಯಾಸ ನಡೆಸಿದ್ದಾರೆ. ಸೋಮವಾರ ಮಲೇಷ್ಯಾಕ್ಕೆ ಪ್ರಯಾಣ ಮಾಡಲಿದ್ದಾರೆ.
ನಿತಿನ್ ಭಾರತ ತಂಡದಲ್ಲಿ ಉಪನಾಯಕನ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ತಂಡ ಇಂತಿದೆ: ಅಮನ್ ದಹಿಯಾ (ನಾಯಕ), ಅಂಕಿತ್ ಕುಮಾರ್, ರಾಕೇಶ್ ಕುಮಾರ್, ನಿತಿನ್ (ಉಪನಾಯಕ), ಯದುವೀರ್ ಸಿಂಗ್, ವಿಪಿನ್ ದಹಿಯಾ, ಅನಿಲ್, ಸಿ.ಚೇತನ್, ಆಕಾಶ್ ಬಾತ್ರಾ, ರಾಹುಲ್ ಯಾದವ್, ಕುಲದೀಪ್ ಶರ್ಮಾ, ಸಿಕಂದರ್, ಅಶೋಕ್ ಕುಮಾರ್ (ಮ್ಯಾನೇಜರ್), ಅನಿಕ್ ಖಾತ್ರಿ (ಕೋಚ್), ಲಲಿತ್ ಕುಮಾರ್ (ಸಹಾಯಕ ಕೋಚ್).
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.