ಸೋಮವಾರ, ಮಾರ್ಚ್ 8, 2021
30 °C

ತ್ರಿವಳಿ ತಲಾಖ್‌ ಪ್ರಶ್ನೆಗೆ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತ್ರಿವಳಿ ತಲಾಖ್‌ ಪ್ರಶ್ನೆಗೆ ಆಕ್ಷೇಪ

ಲಖನೌ: ಬನಾರಸ್‌ ಹಿಂದೂ ವಿಶ್ವವಿದ್ಯಾಲಯದ (ಬಿಎಚ್‌ಯು) ಎಂ.ಎ ಕೋರ್ಸ್‌ನ (ಮಧ್ಯಕಾಲೀನ ಇತಿಹಾಸ) ಪರೀಕ್ಷೆಯಲ್ಲಿ ತ್ರಿವಳಿ ತಲಾಖ್‌ ಮತ್ತು ನಿಖಾ ಹಲಾಲಾ ಕುರಿತಾಗಿ ಪ್ರಶ್ನೆ ಕೇಳಿರುವುದನ್ನು ಕೆಲವು ಮುಸ್ಲಿಂ ಮೌಲ್ವಿಗಳು ಆಕ್ಷೇಪಿಸಿದ್ದಾರೆ.

ಪರೀಕ್ಷೆಯಲ್ಲಿ, ‘ತ್ರಿವಳಿ ತಲಾಖ್‌ ಮತ್ತು ನಿಖಾ ಹಲಾಲಾಗಳು ಸಾಮಾಜಿಕ ಅನಿಷ್ಟಗಳು– ವಿವರಿಸಿ’ ಎಂಬ ಪ್ರಶ್ನೆ ಕೇಳಿರುವುದು ಮೌಲ್ವಿಗಳ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ಪ್ರಶ್ನೆ ಕೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ವಿಶ್ವವಿದ್ಯಾಲಯದ ಆಡಳಿತ ಹೇಳಿದೆ.

ಆದರೆ, ಇಂತಹ ಪ್ರಶ್ನೆಗಳು ಸಮಾಜವನ್ನು ಒಡೆಯುವುದರಿಂದ ಅವುಗಳನ್ನು ಬಿಟ್ಟುಬಿಡಬೇಕು ಎಂದು ಮೌಲ್ವಿಗಳು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.