ಸೋಮವಾರ, ಮಾರ್ಚ್ 1, 2021
31 °C

ಪ್ರತ್ಯೇಕ ಅಪಘಾತ: 3 ಮಂದಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರತ್ಯೇಕ ಅಪಘಾತ: 3 ಮಂದಿ ಸಾವು

ಬೆಳಗಾವಿ: ಇಲ್ಲಿನ ಹಿಂಡಾಲ್ಕೋ ಮೇಲ್ಸೇತುವೆ ಬಳಿ ಭಾನುವಾರ ತಡರಾತ್ರಿ ಕ್ಯಾಂಟರ್- ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿ ಇಬ್ಬರು ಸವಾರರು ಮೃತಪಟ್ಟರು.

ಭಾತಕಾಂಡೆ ಗಲ್ಲಿಯ ಬಾಲಕೃಷ್ಣ ಮಾರುತಿ ಪಿಂಗಟ(24) ಹಾಗೂ ಬಾಪಟ ಗಲ್ಲಿಯ ವಿನಾಯಕ ರಘುನಾಥ ಜಾಧವ(25) ಸ್ಥಳದಲ್ಲೇ ಅಸುನೀಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಪ್ರತೀಕ ಸುಭಾಷ ಜಾಧವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಮನಗರ ಪ್ರಕರಣ

ರಾಮನಗರ: ತಾಲ್ಲೂಕಿನ ಮಾಯಗಾನಹಳ್ಳಿ ಸಮೀಪ ಸೋಮವಾರ ಬೆಳಿಗ್ಗೆ ಹೆದ್ದಾರಿ ಬದಿಯಲ್ಲಿ ನಿಂತಿದ್ದ ಕಂಟೇನರ್‌ಗೆ ಮಿನಿ ಟೆಂಪೊ ಡಿಕ್ಕಿ ಹೊಡೆದು ಕಾರ್ಮಿಕರೊಬ್ಬರು ಸಾವಿಗೀಡಾಗಿದ್ದಾರೆ.

ಚನ್ನಪಟ್ಟಣ ತಾಲ್ಲೂಕಿನ ದೊಡ್ಡಮಳೂರು ನಿವಾಸಿ ಶಿವಕುಮಾರ್ (40) ಮೃತರು‌. ಇವರು ಟೊಯೊಟಾ ಕಂಪೆನಿಯಲ್ಲಿ ಗುತ್ತಿಗೆ ಕಾರ್ಮಿಕರಾಗಿದ್ದು, ಕೆಲಸಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ರಾಮನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.