7

ಎರಡನೇ ಮದುವೆಯಾದ ನಟಿ ಹೇಮಾ

Published:
Updated:
ಎರಡನೇ ಮದುವೆಯಾದ ನಟಿ ಹೇಮಾ

ಬೆಂಗಳೂರು: ಅಮೆರಿಕ ಅಮೆರಿಕ ಸಿನಿಮಾದ ನಾಯಕಿ ಹೇಮಾ, ನಟ ಪ್ರಶಾಂತ್‌ (ಸುಮಂತ್‌) ಅವರನ್ನು ಎರಡನೇ ಮದುವೆಯಾಗಿದ್ದಾರೆ.

ನಟ ಪ್ರಶಾಂತ್‌ ’ರಂಗೋಲಿ’ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದರು. ಪ್ರಶಾಂತ್‌ ಭರತನಾಟ್ಯ ಕಲಾವಿದರಾಗಿದ್ದು ಹೇಮಾ ಜತೆಯಲ್ಲಿ ಹಲವಾರು ಭರತನಾಟ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಈ ಹಿಂದೆ ಹೇಮಾ ಸ್ವಮೇಂದ್ರ ಪಂಚಮುಖಿ ಎಂಬುವರನ್ನು ಮದುವೆಯಾಗಿದ್ದರು. ಕೆಲ ದಿನಗಳ ಕಾಲ ವಿದೇಶದಲ್ಲೂ ನೆಲೆಸಿದ್ದ ಹೇಮಾ ನಂತರದ ದಿನಗಳಲ್ಲಿ ಬೆಂಗಳೂರಿಗೆ ಬಂದು ನೆಲೆಸಿದ್ದರು. ಹೇಮಾ ನಾಟ್ಯ ಶಾಲೆಯನ್ನು ನಡೆಸುತ್ತಿದ್ದಾರೆ.

ದೊರೆ,  ಅಮೆರಿಕ ಅಮೆರಿಕ, ರವಿಮಾಮ ಚಿತ್ರಗಳು ಹೇಮಾಗೆ ಜನಪ್ರಿಯತೆ ತಂದಕೊಟ್ಟಿದ್ದವು.

ಹೇಮಾ ಮದುವೆಯಾಗಿರುವುದಾಗಿ ತಮ್ಮ ಫೇಸ್‌ಬುಕ್‌ನಲ್ಲಿ ಹೇಳಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry