ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಟಕೋತ್ಸವಕ್ಕೆ ‘ಮದುವೆ ಹೆಣ್ಣು’

Last Updated 11 ಡಿಸೆಂಬರ್ 2017, 10:46 IST
ಅಕ್ಷರ ಗಾತ್ರ

ಬ್ರಹ್ಮಾವರ: ಮೇಕಿಂಗ್ ಥಿಯೇಟರ್ ಕಾರ್ಯಕ್ರಮದಡಿಯಲ್ಲಿ ಬೆಂಗಳೂರಿನ ರಂಗಶಂಕರದಲ್ಲಿ ಇದೇ 12ಕ್ಕೆ ನಡೆಯಲಿರುವ ನಾಟಕೋತ್ಸವಕ್ಕೆ ಉಡುಪಿ ಜಿಲ್ಲೆಯ ಬ್ರಹ್ಮಾವರದ ಭೂಮಿಕಾ ಹಾರಾಡಿಯ ನಾಟಕ ‘ಮದುವೆ ಹೆಣ್ಣು’ ಆಯ್ಕೆಗೊಂಡಿದೆ.

ಮೇಕಿಂಗ್ ಥಿಯೇಟರ್ ಕಾರ್ಯಕ್ರಮದಡಿ ಹಲವು ನಿರ್ದೇಶಕರಿಗೆ ರಂಗಶಂಕರದಲ್ಲಿ ತರಬೇತಿ ನೀಡಿ ಅಲ್ಲಿಂದ ಸುಮಾರು ರಾಜ್ಯದಾದ್ಯಂತ 14 ಮಂದಿ ನಿರ್ದೇಶಕರಿಗೆ ನಾಟಕ ಮಾಡಲು ಅವಕಾಶ ನೀಡಲಾಯಿತು. ರಂಗಶಂಕರದ ಆಯ್ಕೆ ಸಮಿತಿಯು ರಾಜ್ಯದಾದ್ಯಂತ ಸಂಚರಿಸಿ ಆಯ್ಕೆಗೊಂಡ ನಿರ್ದೇಶಕರ ತಂಡಗಳ ನಾಟಕಗಳನ್ನು ನೋಡಿ, ಅದರಲ್ಲಿ ಐದು ನಾಟಕಗಳನ್ನ ಅಂತಿಮಗೊಳಿಸಿದೆ. ಅದರಲ್ಲಿ ಬ್ರಹ್ಮಾವರದ ಭೂಮಿಕಾ ಹಾರಾಡಿಯ ‘ಮದುವೆ ಹೆಣ್ಣು’ ನಾಟಕ ಕೂಡ ಆಯ್ಕೆಯಾಗಿದೆ.

ಮದುವೆ ಹೆಣ್ಣು ನಾಟಕದ ರಚನೆಯನ್ನು ಡಾ.ಎಚ್.ಎಸ್. ಶಿವಪ್ರಕಾಶ್ ಮಾಡಿದ್ದು, ರೋಹಿತ್ ಎಸ್.ಬೈಕಾಡಿ ನಿರ್ದೇಶಿಸಿ, ಸಂಗೀತ ಸಂಯೋಜನೆ ನೀಡಿದ್ದಾರೆ. ಬೆಳಕಿನ ವಿನ್ಯಾಸವನ್ನು ಬಿ.ಎಸ್.ರಾಂ ಶೆಟ್ಟಿ ಮತ್ತು ಪರಿಕರ ಮತ್ತು ರಂಗಸಜ್ಜಿಕೆಯನ್ನು ಪ್ರಸಾದ್ ಸಾಲಿಕೇರಿ ನಿರ್ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT