ಹೃತಿಕ್ ಸ್ತ್ರೀಪರ ನಿಲುವು

‘ಸ್ತ್ರೀವಾದ, ಸ್ತ್ರೀಸಮಾನತೆ ಎಂಬುದು ವ್ಯಕ್ತಿಗತವಾಗಿದ್ದು ಅದನ್ನು ಲಿಂಗತ್ವಕ್ಕೆ ಸೀಮಿತವಾಗಿಸಬೇಕಿಲ್ಲ’ ಎಂದು ನಟ ಹೃತಿಕ್ ರೋಶನ್ ಹೇಳಿರುವುದು ಕುತೂಹಲ ಹುಟ್ಟಿಸಿದೆ. ಮಾನವ ಹಕ್ಕುಗಳ ದಿನದ ಹಿನ್ನೆಲೆಯಲ್ಲಿ ತಮ್ಮ ಅಭಿಪ್ರಾಯವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಅವರು ಸ್ತ್ರೀವಾದ ಎಂಬ ಶಬ್ದ ಭಯವನ್ನು ಹುಟ್ಟಿಸುವ ಶಬ್ದವಂತಾಗಬಾರದು ಎಂದೂ ಹೇಳಿದ್ದಾರೆ.
‘ಫೆಮಿನಿಸಂ ಶಬ್ದದಲ್ಲಿಯೇ ಎಲ್ಲವೂ ಇದೆ. ಸಮಾನತೆಯನ್ನು ಜಾರಿಗೆ ತರುವಲ್ಲಿ ಮಹಿಳೆಯರಷ್ಟೇ ಪುರುಷರ ಪಾತ್ರವೂ ಇದೆ. ಪುರುಷನೋ ಮಹಿಳೆಯೋ ಎನ್ನುವುದಕ್ಕಿಂತ ವ್ಯಕ್ತಿಯ ಅರ್ಹತೆಯನ್ನು ಅದು ಆಧರಿಸಿರುತ್ತದೆ. ಹಾಗೆ ನೋಡಿದರೆ ಫೆಮಿನಿಸಂ ಎಂದರೆ ಮಾನವೀಯತೆಯೆಡೆಗಿನ ಹೋರಾಟ ಎಂದು ಅರ್ಥೈಸಿಕೊಳ್ಳಬೇಕು. ಅದನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಳ್ಳುವುದರಲ್ಲಿ ನಾವು ಸೋಲುತ್ತಿದ್ದೇವೆ. ಈ ವಿಷಯದಲ್ಲಿ ಭಯಪಡಬೇಕೇ ಹೊರತು ಫೆಮಿನಿಸಂ ಎಂಬ ಶಬ್ದಕ್ಕಲ್ಲ’ ಎಂದು ಅವರು ವ್ಯಾಖ್ಯಾನಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.