ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಬ್‌ಸೈಟ್‌ಗಿಂತ ಮುದ್ರಣ ಮಾಧ್ಯಮದತ್ತ ಯುವಕರ ಒಲವು

Last Updated 11 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಲಂಡನ್‌: ಯುವ ಓದುಗರು ಸುದ್ದಿಗಾಗಿ ವೆಬ್‌ಸೈಟ್‌ ಮತ್ತು ಆ್ಯಪ್‌ಗಳಿಗಿಂತ ಮುದ್ರಣ ಮಾಧ್ಯಮಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ಎನ್ನುವುದು ಅಧ್ಯಯನದಿಂದ ತಿಳಿದು ಬಂದಿದೆ.

ಸುದ್ದಿಗಾಗಿ ಸ್ಮಾರ್ಟ್‌ಫೋನ್‌ಗಳಲ್ಲಿ ಆ್ಯಪ್‌ ಮತ್ತು ವೆಬ್‌ಸೈಟ್‌ಗಳನ್ನು ನೋಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆದರೆ, ಯುವ ಓದುಗರು ಈ ಆಧುನಿಕ ಜಾಲತಾಣಗಳಿಗಿಂತ ಮುದ್ರಣ ಮಾಧ್ಯಮಕ್ಕೆ ದುಪ್ಪಟ್ಟು ಸಮಯ ಮೀಸಲಿಡುತ್ತಿದ್ದಾರೆ ಎಂದು ಯೂನಿವರ್ಸಿಟಿ ಆಫ್‌ ಲಂಡನ್‌ನ ಸಂಶೋಧಕರು ತಿಳಿಸಿದ್ದಾರೆ.

ಮುದ್ರಣ ಮತ್ತು ಆನ್‌ಲೈನ್‌ನಲ್ಲಿ ಯುವಕರು ಎಷ್ಟು ಸಮಯ ಕಳೆಯುತ್ತಿದ್ದಾರೆ ಎನ್ನುವ ಕುರಿತು ಸಂಶೋಧಕರು ಆಳವಾದ ಅಧ್ಯಯನ  ನಡೆಸಿದ್ದಾರೆ.

ದಿನಪತ್ರಿಕೆಗಳ ಪ್ರಸಾರ ಸಂಖ್ಯೆ ಕುಸಿಯುತ್ತಿದೆ ಮತ್ತು ಸ್ಮಾರ್ಟ್‌ಫೋನ್‌ಗಳ ಮೂಲಕವೇ ಸುದ್ದಿಗಳನ್ನು ಓದುತ್ತಿದ್ದಾರೆ ಎನ್ನುವ ವರದಿಗಳ ಕುರಿತು ಸಂಶೋಧಕರು ವಿಶ್ಲೇಷಣೆ ನಡೆಸಿದಾಗ ವಿಭಿನ್ನವಾದ ಫಲಿತಾಂಶ ದೊರೆತಿದೆ. ಈಗಲೂ ಎಲ್ಲ ವಯೋಮಾನದವರು ವೆಬ್‌ಸೈಟ್‌ ಮತ್ತು ಆ್ಯಪ್‌ಗಳಿಗಿಂತ ಮುದ್ರಣ ಮಾಧ್ಯಮಕ್ಕೆ ಹೆಚ್ಚು ಒಲವು ತೋರಿದ್ದಾರೆ ಎನ್ನುವುದು ಸಾಬೀತಾಗಿದೆ.

18ರಿಂದ 34 ವಯೋಮಾನದವರು ಪ್ರತಿ ದಿನ ಮುದ್ರಣವಾದ ದಿನಪತ್ರಿಕೆ ಓದಲು ಸರಾಸರಿ 23 ನಿಮಿಷಗಳನ್ನು ಮೀಸಲಿಡುತ್ತಾರೆ. ಶನಿವಾರ ಮತ್ತು ಭಾನುವಾರ ಇನ್ನೂ ಹೆಚ್ಚಿನ ಸಮಯ ಮೀಸಲಿಡುತ್ತಾರೆ. ಇದೇ ವಯೋಮಾನದ ಆನ್‌ಲೈನ್‌ ಓದುಗರು ಪ್ರತಿ ದಿನ ವೆಬ್‌ಸೈಟ್‌ ಮತ್ತು ಆ್ಯಪ್‌ಗಳಲ್ಲಿ ಸುದ್ದಿಗಳನ್ನು ಕೇವಲ 43 ಸೆಕೆಂಡ್‌ಗಳಲ್ಲಿ ಓದುತ್ತಾರೆ. ಅಂದರೆ ಕೇವಲ ಪಕ್ಷಿನೋಟ ರೀತಿಯಲ್ಲಿ ಮುಖ್ಯವಾದ ಅಂಶಗಳನ್ನು ಓದುತ್ತಾ ಸಾಗುತ್ತಾರೆ.

ಡಿಜಿಟಲ್‌ ಮಾಧ್ಯಮ ಸುಲಭವಾಗಿ ಕೈಗೆಟಕುತ್ತಿದ್ದರೂ ಯುವಕರಿಗೆ ಮುದ್ರಣ ಮಾಧ್ಯಮವೇ ಹೆಚ್ಚು ಆಕರ್ಷಣೀಯವಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT