ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲು ಸೊಸೈಟಿ ನೌಕರರಿಗೆ ಪ್ರೋತ್ಸಾಹಧನ ಇಲ್ಲ

Last Updated 12 ಡಿಸೆಂಬರ್ 2017, 8:42 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ಒಂದು ಲೀಟರ್‌ ಹಾಲಿಗೆ ₹20 ಪೈಸೆಯಂತೆ ನೌಕರರಿಗೆ ನೀಡುವುದಾಗಿ ನೀಡಿದ್ದ ಭರವಸೆ ಸುಳ್ಳಾಗಿದೆ. ನಮ್ಮ ಬೇಡಿಕೆಗೆ ಸ್ಪಂದಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಬಮೂಲ್‌ ಹೊರತುಪಡಿಸಿ ಸರ್ಕಾರದ ಯಾವುದೇ ಕೆಲಸಗಳನ್ನು ಮಾಡುವುದಿಲ್ಲ’ ಎಂದು ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಒಕ್ಕೂಟದ ಅಧ್ಯಕ್ಷ ಟಿ.ಎಸ್‌.ರುದ್ರಪ್ಪ ಹೇಳಿದರು.

ಅವರು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ರೈತರಿಗೆ ಎರಡು ರೂಪಾಯಿ ಪ್ರೋತ್ಸಾಹಧನ ನೀಡಲಾಯಿತು. ಈ ಸಂದರ್ಭದಲ್ಲಿ ನೌಕರರಿಗೆ ಲೀಟರ್‌ಗೆ ₹20 ಪೈಸೆ ನೀಡುವ ಭರವಸೆ ನೀಡಿದ್ದರು ಎಂದರು.

ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾದ ಮೇಲೆ ರೈತರು ಸರಬರಾಜು ಮಾಡುವ ಒಂದು ಲೀಟರ್‌ ಹಾಲಿಗೆ ಐದು ರೂ‍ಪಾಯಿ ಪ್ರೋತ್ಸಾಹಧನ ನೀಡಲಾಗುತ್ತಿದೆ. ಆದರೆ ನೌಕರರಿಗೆ ಮಾತ್ರ ಇದುವರೆಗೂ 20 ಪೈಸೆ ನೀಡುವ ಭರವಸೆ ಹುಸಿಯಾಗಿದೆ ಎಂದರು.

ರೈತರಿಗೆ ₹5 ಗಳನ್ನು ಪ್ರೋತ್ಸಾಹವಾಗಿ ನೀಡುತ್ತಿರುವುದಕ್ಕೆ ಪ್ರತ್ಯೇಕ ಲೆಕ್ಕಪತ್ರಗಳನ್ನು ಇಟ್ಟು ಸರ್ಕಾರದ ಹಣ ನೇರವಾಗಿ ರೈತರ ಖಾತೆಗಳಿಗೆ ಪ್ರತಿ ತಿಂಗಳು ಜಮಾ ಆಗುವಂತೆ ಮಾಡಲಾಗುತ್ತಿದೆ. ಹಾಗೆಯೇ ಸಹಕಾರ ಸಂಘದಲ್ಲಿ ಯಶಸ್ವಿನಿ ಯೋಜನೆಯ ಎಲ್ಲ ಕೆಲಸವನ್ನು ಸಂಘದ ಕಾರ್ಯನಿರ್ವಾಹಕ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ತಿಳಿಸಿದರು.

ನೌಕರರಿಗೆ ಒಂದು ಲೀಟರ್‌ ಹಾಲಿಗೆ ನೀಡುವ 20 ಪೈಸೆ ಮಾತ್ರ ಇದುವರೆಗೂ ನೀಡದೆ ವಂಚಿಸಲಾಗುತ್ತಿದೆ. ಇದನ್ನು ಪ್ರತಿಭಟಿಸಲು ಮುಂದಿ ದಿನಗಳಲ್ಲಿ ಸರ್ಕಾರ ರೈತರಿಗೆ ನೀಡುವ ₹5ಗಳ ಪ್ರೋತ್ಸಾಹದ ಹಣದ ಲೆಕ್ಕಪತ್ರಗಳನ್ನು ಸರ್ಕಾರಕ್ಕೆ ನೀಡುವುದಿಲ್ಲ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಎಚ್‌.ನಾರಾಯಣಪ್ಪ ಮಾತನಾಡಿ, ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕೆಲಸ ಮಾಡುವ ನೌಕರರಿಗೆ ಈಗ ಹಾಲು ಸಂಗ್ರಹಣೆಯ ಆಧಾರದ ಮೇಲೆ ಸಂಬಳ ನೀಡಲಾಗುತ್ತಿದೆ. ಇದನ್ನು ನಿಲ್ಲಿಸಿ ಕನಿಷ್ಠ ವೇತನವನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ರಜೆ ಇಲ್ಲದೆ ಕಲಸ ಮಾಡುತ್ತಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರಿಗೆ ಸೂಕ್ತ ಸೌಲಭ್ಯಗಳನ್ನು ನೀಡದೇ ಇದ್ದರೆ ಹೋರಾಟ ನಡೆಸಲಾಗುವುದು ಎಂದರು. ಸಂಘಟನಾ ಕಾರ್ಯದರ್ಶಿ ಆರ್‌.ಸತೀಶ್‌, ಶ್ರೀನಿವಾಸ್‌, ಜಿಲ್ಲಾ ನಿರ್ದೇಶಕ ಡಿ.ಸಿ.ರಮೇಶ್‌, ರಾಮಮೂರ್ತಿ, ರುದ್ರಮೂರ್ತಿ, ಮಂಜುನಾಥ್‌, ಚನ್ನಕೇಶವ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT