ಶನಿವಾರ, ಮಾರ್ಚ್ 6, 2021
24 °C

ಟ್ರೂ ಬ್ಯಾಲನ್ಸ್‌: ಮೊಬೈಲ್‌ ವಾಲೆಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟ್ರೂ ಬ್ಯಾಲನ್ಸ್‌: ಮೊಬೈಲ್‌ ವಾಲೆಟ್‌

ಗೂಗಲ್ ಪ್ಲೇಸ್ಟೋರ್‌ನಲ್ಲಿ ಜೀವನಶೈಲಿಯ ಅತ್ಯಂತ ಜನಪ್ರಿಯ ಕಿರುತಂತ್ರಾಂಶಗಳಲ್ಲಿ (ಅಪ್ಲಿಕೇಷನ್ಸ್‌) ಒಂದಾಗಿರುವ ಟ್ರೂ ಬ್ಯಾಲನ್ಸ್‌  (True Balance) ಈಗ ಹಣಕಾಸು ತಂತ್ರಜ್ಞಾನ ವಹಿವಾಟಿಗೆ ಪ್ರವೇಶ ಮಾಡಿದ್ದು, ಮೊಬೈಲ್‌ ವಾಲೆಟ್‌ ಸೇವೆಗೆ ಚಾಲನೆ ನೀಡಿದೆ.

  ಈ ಸೌಲಭ್ಯದ ಅನ್ವಯ, ಬಳಕೆದಾರರು ವಾಲೆಟ್‌ಗೆ ಹಣ ಸೇರ್ಪಡೆ, ತ್ವರಿತವಾಗಿ ರೀಚಾರ್ಜ್‌ ಮಾಡುವುದು, ವಾಲೆಟ್‌ನಿಂದ ವಾಲೆಟ್‌ಗೆ ಸುಲಭವಾಗಿ ಹಣ ವರ್ಗಾವಣೆ ಮಾಡುವ ಸೌಲಭ್ಯ ಪಡೆಯಲಿದ್ದಾರೆ. ಜತೆಗೆ, ವಾಲೆಟ್‌ನಲ್ಲಿ ಇರುವ ಹಣವನ್ನು ಬ್ಯಾಂಕ್‌ ಖಾತೆಗೆ ವರ್ಗಾಯಿಸುವ ಸೌಲಭ್ಯವನ್ನೂ ಇಲ್ಲಿ ಕಲ್ಪಿಸಲಾಗಿದೆ. ಟ್ರೂ ಬ್ಯಾಲನ್ಸ್‌ ವಾಲೆಟ್‌, ಆರ್‌ಬಿಐ ನಿಬಂಧನೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲಿದೆ. ಡೇಟಾ ಸುರಕ್ಷತೆ ಕಾಯ್ದುಕೊಳ್ಳಲು ಗರಿಷ್ಠ ಆದ್ಯತೆ ನೀಡುತ್ತಿದೆ.

‘ಡಿಜಿಟಲ್‌ ಪಾವತಿ ಸೇವೆ ಒದಗಿಸುವ ಮೂಲಕ ನಾವು ಈಗ ಸಾಧನೆಯ ಇನ್ನೊಂದು ಮಹತ್ವದ ಮೈಲುಗಲ್ಲು ಸಾಧಿಸಿದ್ದೇವೆ.   ಸರ್ಕಾರದ ‘ಡಿಜಿಟಲ್‌ ಭಾರತ್‌’ ನಿರ್ಮಾಣದ ಕನಸು ಸಾಕಾರಗೊಳಿಸಲು ನೆರವಾಗುತ್ತಿದೆ. ಗ್ರಾಹಕರು ತಮ್ಮ ಮೊಬೈಲ್‌ನಿಂದ ಸುರಕ್ಷಿತವಾಗಿ ಮತ್ತು ಯಾವುದೇ ಅಡಚಣೆ ಇಲ್ಲದೇ ನಿರಂತರವಾಗಿ ವಿವಿಧ ಸೇವೆಗಳಿಗೆ ಹಣ ಪಾವತಿಸಬಹುದು. ಗ್ರಾಹಕರ ಜತೆ ನಿರಂತರ ಸಂಪರ್ಕದಲ್ಲಿ ಇರುವುದು ಮತ್ತು ವಹಿವಾಟು ವಿಸ್ತರಿಸಲು ಈ ಮೊಬೈಲ್‌ ವಾಲೆಟ್‌ ವಹಿವಾಟು ಆರಂಭಿಸಲಾಗಿದೆ’ ಎಂದು ಟ್ರೂ ಬ್ಯಾಲನ್ಸ್‌ನ ಸಿಇಒ ಚಾರ್ಲಿ ಲೀ ಹೇಳಿದ್ದಾರೆ.

ಮೊಬೈಲ್‌ ಪೂರ್ವಪಾವತಿ ಬಳಕೆದಾರರಿಗೆ ಮೊಬೈಲ್‌ ಬ್ಯಾಲನ್ಸ್‌ ನಿರ್ವಹಣೆ ಸೇವೆ ಒದಗಿಸುತ್ತಿದ್ದ ಟ್ರೂ ಬ್ಯಾಲನ್ಸ್‌ ಆ್ಯಪ್‌, ಈಗಾಗಲೇ 5 ಕೋಟಿಗಳಷ್ಟು ಡೌನ್‌ಲೋಡ್‌ ಆಗಿದೆ. ಮೊಬೈಲ್‌ ಬಿಲ್‌ ನಿರ್ವಹಣೆಯಲ್ಲಿ ಈ ಆ್ಯಪ್‌ ಹಲವಾರು ಸೌಲಭ್ಯಗಳನ್ನು ಒದಗಿಸುತ್ತಿದೆ. ಗ್ರಾಹಕರು ತಮ್ಮ ಡೇಟಾ ಬಳಕೆ ತಿಳಿದುಕೊಳ್ಳಲು, ಮೊಬೈಲ್‌ ಬ್ಯಾಲನ್ಸ್‌, ರೀಚಾರ್ಜ್‌ ಮಾಡಬೇಕಾದ ದಿನ ಮತ್ತಿತರ ವಿವರಗಳನ್ನು ಒದಗಿಸುತ್ತಿದೆ.

ಈ ಕಿರುತಂತ್ರಾಂಶವು ‘ಒನ್‌ ಕ್ಲಿಕ್‌ – ರೀಚಾರ್ಜ್‌ ಫೀಚರ್‌’ ಸೌಲಭ್ಯವನ್ನೂ ಒದಗಿಸುತ್ತಿದ್ದು, ಇದರಿಂದ ಸುಲಭವಾಗಿ ಫೋನ್‌ ಬಿಲ್‌ಗಳನ್ನೂ ಪಾವತಿಸಲು ಸಾಧ್ಯವಿದೆ. ಈಗ ಮೊಬೈಲ್‌ ವಾಲೆಟ್‌ ಸೇವೆ ಆರಂಭಿಸುತ್ತಿದೆ. ಇದರಿಂದ ಈ ಆ್ಯಪ್‌, ಬ್ಯಾಲನ್ಸ್‌ ಪರೀಕ್ಷಿಸುವ ಆ್ಯಪ್‌ನಿಂದ ಬಿಲ್ಸ್‌ ಪರೀಕ್ಷಿಸುವ ಮತ್ತು ಹಣ ಪಾವತಿಸುವ ಆ್ಯಪ್‌ ಆಗಿ ಪ್ರಗತಿ ಕಂಡಿದೆ.

ಈಗ ಟ್ರೂ ಬ್ಯಾಲನ್ಸ್‌ ಮೊಬೈಲ್‌ ವಾಲೆಟ್‌, ಗ್ರಾಹಕರು ಹಣವನ್ನು ತಮ್ಮ ಟ್ರೂ ಬ್ಯಾಲನ್ಸ್‌ ವಾಲೆಟ್‌ನಲ್ಲಿ ಉಚಿತವಾಗಿ ಹಣ ಠೇವಣಿ ಇರಿಸಬಹುದು. ಈ ಮೂಲಕ ಸುಲಭವಾಗಿ ಫೋನ್‌ ರೀಚಾರ್ಜ್ ಮಾಡಿಸಬಹುದು.

ಡೇಟಾ ಉಳಿತಾಯಕ್ಕೆ ಗೂಗಲ್‌ನ ‘ಡೇಟಾಲಿ’

ತಂತ್ರಜ್ಞಾನ ಕ್ಷೇತ್ರದಲ್ಲಿ ಗೂಗಲ್‌ ಕಾಲ ಕಾಲಕ್ಕೆ ಹೊಸ ಹೊಸ ಸೇವೆಗಳನ್ನು ನೀಡುತ್ತ ಬಂದಿದೆ. ಇದೀಗ ಆಂಡ್ರಾಯ್ಡ್‌ ಮೊಬೈಲ್‌ಗಳಲ್ಲಿ ಇಂಟರ್‌ನೆಟ್‌ ಬಳಕೆ ಉಳಿತಾಯ ಮಾಡುವ ’ಡೇಟಾಲಿ ಆ್ಯಪ್‌’  ಬಿಡುಗಡೆ ಮಾಡಿದೆ. ಮೊಬೈಲ್‌ ಡೇಟಾ ಉಳಿತಾಯ ಮಾಡಲು ಈ ಆ್ಯಪ್‌ ಸಹಕಾರಿಯಾಗಲಿದೆ.

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಈ ಅಪ್ಲಿಕೇಷನ್‌ ಅನ್ನು ಬಳಕೆದಾರರು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ’ಡೇಟಾಲಿ ಆ್ಯಪ್‌’  ಡೌನ್‌ಲೋಡ್‌ ಮಾಡಿಕೊಂಡ ಬಳಿಕ ಡೇಟಾ ಉಳಿಸುವ ಕೆಲಸವನ್ನು ಈ ಅಪ್ಲಿಕೇಷನ್ ಮಾಡಲಿದೆ. ಇದರ ಜತೆಗೆ ಹತ್ತಿರದಲ್ಲಿರುವ ವೈಫೈ ಕುರಿತು ಮಾಹಿತಿಯನ್ನೂ ನೀಡುತ್ತದೆ.

ಇದರ ಮೂಲಕ ಬಳಕೆದಾರರು ತಮ್ಮ ಮೊಬೈಲ್ ಡೇಟಾ ಬಳಕೆ ಮೇಲೆ ಗಂಟೆ, ದಿನ, ವಾರ, ತಿಂಗಳುಗಳಲ್ಲಿ ಸುಲಭವಾಗಿ ನಿಗಾ ಇರಿಸಬಹುದು.   ಅನವಶ್ಯಕವಾಗಿ ಬ್ಯಾಕ್ ಗ್ರೌಂಡ್ ನಲ್ಲಿ ಡೇಟಾ ಬಳಕೆಯಾಗುವುದನ್ನು ತಡೆಯಲು ಈ ಆ್ಯಪ್‌  ಸಹಕಾರಿಯಾಗಿದೆ.

ಮೊಬೈಲ್‌ ಫೋನ್‌ಗಳಲ್ಲಿರುವ ಆ್ಯಪ್‌ಗಳು ಎಷ್ಟು ಡೇಟಾ ಬಳಕೆ ಮಾಡುತ್ತಿವೆ ಎಂಬುದನ್ನು ತಿಳಿಯಬಹುದು. ಅತಿ ಹೆಚ್ಚು ಡೇಟಾ ಬಳಕೆ ಮಾಡುವ ಆ್ಯಪ್‌ಗಳನ್ನು ಬ್ಲ್ಯಾಕ್‌ ಮಾಡಬಹುದು. ಒಟ್ಟಾರೆ ಬಳಕೆದಾರರು ಈ ಆಪ್ ನಿಂದಾಗಿ ಶೇ 30 ರಷ್ಟು ಡೇಟಾ ಉಳಿಸಬಹುದು.

ಗೂಗಲ್ ಪ್ಲೇ ಸ್ಟೋರ್‌: Datally app

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.