ಗುರುವಾರ , ಫೆಬ್ರವರಿ 25, 2021
17 °C

‘ಇದು ನನ್ನ ದೇಹ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಇದು ನನ್ನ ದೇಹ’

ನಟಿಯರು ಯಾವಾಗಲೂ ಸಣ್ಣಗೆ, ಬಳುಕುವ ದೇಹಾಕೃತಿ ಹೊಂದಲು ಇಷ್ಟಪಡುತ್ತಾರೆ. ಆದರೆ ತೂಕ ಹೆಚ್ಚಿಸಿಕೊಂಡಿದ್ದರೂ, ಮನೋಜ್ಞ ಅಭಿನಯದ ಮೂಲಕ ಅಭಿಮಾನಿಗಳನ್ನು ಸಂಪಾದಿಸಿಕೊಂಡವರು ನಟಿ ವಿದ್ಯಾ ಬಾಲನ್‌.

ಇತ್ತೀಚೆಗೆ ವಿದ್ಯಾ ಬಾಲನ್‌ ಅಭಿನಯದ ‘ತುಮ್ಹಾರಿ ಸುಲು’ ಸಿನಿಮಾ ಬಿಡುಗಡೆಯಾಗಿದೆ. ಇದರಲ್ಲಿ ವಿದ್ಯಾ ಗೃಹಿಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಣ್ಣಗಿದ್ದ ವಿದ್ಯಾ ಬಾಲನ್‌ ಈಗ ದಪ್ಪಗಾಗಿದ್ದಾರೆ. ಆದರೆ ದೇಹದ ತೂಕ ಹೆಚ್ಚಿರುವ ಬಗ್ಗೆ ವಿದ್ಯಾಗೆ ಬೇಸರವಿಲ್ಲ. ಬದಲಾಗಿ ತನ್ನ ದೇಹದ ಬಗ್ಗೆ ಹೆಮ್ಮೆ ಇದೆ. ತೂಕ ಹೆಚ್ಚಿದ್ದರಿಂದ ‘ಸೆಕ್ಸಿ’ ಪಾತ್ರಗಳು ತಪ್ಪಿದ ಬಗ್ಗೆಯಾಗಲೀ, ಜನರು ಏನು ಹೇಳುತ್ತಾರೆ ಎಂಬ ಬಗ್ಗೆಯಾಗಲೀ ಇವರು ತಲೆಕೆಡಿಸಿಕೊಂಡಿಲ್ಲ.

‘ತುಮ್ಹಾರಿ ಸುಲು’ ಚಿತ್ರ ಪ್ರಚಾರದ ಸಂದರ್ಭದಲ್ಲಿ ವರದಿಗಾರರರೊಬ್ಬರು ವಿದ್ಯಾ ಬಾಲನ್‌ ಅವರ ಬಳಿ ‘ಮಹಿಳಾ ಕೇಂದ್ರಿತ ಸಿನಿಮಾಗಳಲ್ಲಿ ನಟಿಸುತ್ತೀರಾ?’ ಅಥವಾ ‘ತೂಕ ಕಡಿಮೆ ಮಾಡಿಕೊಂಡು ಗ್ಲಾಮರಸ್‌ ಪಾತ್ರಗಳಲ್ಲೂ ಮುಂದೆ ನಟಿಸುತ್ತೀರಾ?’ ಎಂದು ಪ್ರಶ್ನಿಸಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ವಿದ್ಯಾಬಾಲನ್‌, ’ನಾನು ಮಾಡುತ್ತಿರುವ ಕೆಲಸದಲ್ಲಿ ನನಗೆ ಖುಷಿಯಿದೆ. ಜನರು ಇಂತಹ ಮನಸ್ಥಿತಿಯನ್ನು ಬದಲಾಯಿಸಿಕೊಂಡರೆ ನನಗೆ ಸಂತೋಷವಾಗುತ್ತದೆ’ ಎಂದಿದ್ದಾರೆ.

ಈ ಹಿಂದೆ ‘ಡರ್ಟಿ ಪಿಕ್ಚರ್‌’ ಸಿನಿಮಾ ಬಿಡುಗಡೆ ಸಂದರ್ಭದಲ್ಲೂ ಈ ರೀತಿಯ ಪ್ರಶ್ನೆಗಳು ಕೇಳಿಬಂದಿದ್ದವು. ಆಗ ‘ಇದು ನನ್ನ ದೇಹ, ನಾನು ನನ್ನ ದೇಹವನ್ನು ಪ್ರೀತಿಸುತ್ತೇನೆ. ಜನರು ಏನು ಮಾತನಾಡುತ್ತಾರೆ ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ಬೇರೆ ಬೇರೆ ಜನರು ಬೇರೆಯಾಗಿಯೇ ಮಾತನಾಡುತ್ತಾರೆ. ನಾನು ಕನ್ನಡಿ ನೋಡಿಕೊಂಡಾಗ ನಾನು ಏನು ಧರಿಸಿದ್ದೇನೆ ಎಂಬುದನ್ನೂ ಗಮನಿಸಿಕೊಳ್ಳುತ್ತೇನೆ. ಖುಷಿಯಾಗಿಯೇ ಮನೆಯಿಂದ ಹೊರಡುತ್ತೇನೆ’ ಎಂದು ಹೇಳಿದ್ದರು.⇒v

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.