ಭಾನುವಾರ, ಮಾರ್ಚ್ 7, 2021
19 °C

ವೋಲ್ವೊ ‘ಎಕ್ಸ್‌ಸಿ 60' ಮಾರುಕಟ್ಟೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೋಲ್ವೊ ‘ಎಕ್ಸ್‌ಸಿ 60' ಮಾರುಕಟ್ಟೆಗೆ

ನವದೆಹಲಿ: ವಿಲಾಸಿ ಕಾರ್‌ ತಯಾರಿಕಾ ಸಂಸ್ಥೆ ವೋಲ್ವೊ ಕಾರ್ಸ್‌, ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌ (ಎಸ್‌ಯುವಿ) ‘ಎಕ್ಸ್‌ಸಿ 60’ನ  ಹೊಸ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ನೂತನ ‘ಎಸ್‌ಯುವಿ’  ಬಿಡುಗಡೆ ಮಾಡಿದ ಸಂಸ್ಥೆಯ ಭಾರತದ ವ್ಯವಸ್ಥಾಪಕ ನಿರ್ದೇಶಕ ಚಾರ್ಲ್ಸ್‌ ಫ್ರಂಪ್‌, ‘ಭಾರತದ ರಸ್ತೆಗಳಿಗೆ ಹೊಂದಿ

ಕೊಳ್ಳುವಂತೆ ವಿನ್ಯಾಸಗೊಳಿಸಿರುವ ಅತ್ಯಾಧುನಿಕ ಮಾದರಿ ಗ್ರಾಹಕರ ಮನ ಸೆಳೆಯಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

‘ಪ್ರಸಕ್ತ ಸಾಲಿನಲ್ಲಿ ಹೊಸ ಮಾದರಿಯ 2,000 ‘ಎಸ್‌ಯುವಿ’ಗಳ ಮಾರಾಟದ ಗುರಿ ನಿಗದಿಪಡಿಸಲಾಗಿದೆ. ಕಳೆದ ವರ್ಷ ಮಾರಾಟವಾಗಿರುವ ಹಳೆಯ ಮಾದರಿಯ ‘ಎಸ್‌ಯುವಿ’ಗಳ ಮಾರಾಟಕ್ಕೆ ಹೋಲಿಸಿದರೆ ಈ ಪ್ರಮಾಣ ಶೇ 25ರಷ್ಟು ಹೆಚ್ಚಿಗೆ ಇರಲಿದೆ’ ಎಂದರು.

ಜಾಗತಿಕವಾಗಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಕಾರ್‌ಗಳನ್ನು ತಯಾರಿಸುವ ನಮ್ಮ ಕಂಪೆನಿಯು, ಭಾರತದ ಗ್ರಾಹಕರನ್ನು ದೃಷ್ಟಿಯಲ್ಲಿರಿಸಿಕೊಂಡು ನೂತನ ಮಾದರಿಯ ಎಸ್‌ಯುವಿ ಅಭಿವೃದ್ಧಿಪಡಿಸಿದೆ. ಇದರ ಎಕ್ಸ್‌ ಷೋ ರೂಂ ಬೆಲೆ ₹ 55.09 ಲಕ್ಷ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.