ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲ್ಯಾಪ್‌ಟಾಪ್‌ ಹೆಚ್ಚು ಬಿಸಿಯಾಗುತ್ತಿದೆಯೇ?

Last Updated 13 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಉಪಕರಣಗಳು ಹೆಚ್ಚು ಕೆಲಸ ಮಾಡುತ್ತಿರುವಾಗ ಬಿಸಿಯಾಗುವುದು ಸಾಮಾನ್ಯ. ಲ್ಯಾಪ್‌ಟಾಪ್‌ ಹೆಚ್ಚು ಬಿಸಿಯಾಗಲು ಕಾರಣವೇನು ಮತ್ತು ಅದನ್ನು ತಿಳಿಯುವುದು ಹೇಗೆ ಎಂಬ ಬಗ್ಗೆ ಈ ವಾರ ತಿಳಿಯೋಣ.

ಲ್ಯಾಪ್‌ಟಾಪ್‌ನ ಫ್ಯಾನ್‌ ಹೆಚ್ಚು ವೇಗವಾಗಿ ತಿರುಗುತ್ತಿದೆ ಎಂದರೆ ಲ್ಯಾಪ್‌ಟಾಪ್‌ ಹೆಚ್ಚು ಬಿಸಿಯಾಗುತ್ತಿದೆ ಎಂದೇ ಅರ್ಥ. ಬಿಸಿಯಾಗಿರುವ ಸಿಪಿಯು ಅನ್ನು ತಣ್ಣಗೆ ಮಾಡಲು ಲ್ಯಾಪ್‌ಟಾಪ್‌ನ ಫ್ಯಾನ್‌ ಹೆಚ್ಚು ವೇಗವಾಗಿ ತಿರುಗುತ್ತಿರುತ್ತದೆ. ನಿಮ್ಮ ಲ್ಯಾಪ್‌ಟಾಪ್‌ ಹೆಚ್ಚು ಬಿಸಿಯಾಗುತ್ತಿದೆ ಎಂದು ನೀವು ಇದರಿಂದಲೇ ತಿಳಿಯಬಹುದು.

ನೀವು ಹೆಚ್ಚಾಗಿ ಹಾಸಿಗೆ ಅಥವಾ ಸೋಫಾ ಮೇಲೆ ಲ್ಯಾಪ್‌ಟಾಪ್‌ ಇಟ್ಟುಕೊಂಡು ಕೆಲಸ ಮಾಡುತ್ತಿದ್ದರೆ ಹಾಸಿಗೆ / ಸೋಫಾದ ಮೇಲಿರುವ ಪಾಲಿ, ಹತ್ತಿ, ಉಲ್ಲನ್‌ ಇಲ್ಲವೇ ಸಣ್ಣದಾರಗಳು ಲಾಪ್‌ಟಾಪ್‌ ಫ್ಯಾನ್‌ನ ಒಳಭಾಗದಲ್ಲಿ ಸುತ್ತಿಕೊಳ್ಳುತ್ತವೆ. ಇದರಿಂದ ಫ್ಯಾನ್‌ ಸರಿಯಾಗಿ ತಿರುಗಲಾಗದ ಕಾರಣಕ್ಕೂ ಲ್ಯಾಪ್‌ಟಾಪ್‌ ಬಿಸಿಯಾಗಬಹುದು.

ಲ್ಯಾಪ್‌ಟಾಪ್‌ ಅನ್ನು ಸ್ಟ್ಯಾಂಡ್‌ಬೈನಲ್ಲಿ ಬ್ಯಾಗ್‌ಗೆ ಇಡಬೇಡಿ. ಇದರಿಂದಲೂ ಲ್ಯಾಪ್‌ಟಾಪ್‌ ಹೆಚ್ಚು ಬಿಸಿಯಾಗುತ್ತದೆ. ಕೆಲಸ ಮುಗಿದ ಮೇಲೆ ಲ್ಯಾಪ್‌ಟಾಪ್‌ ಮುಚ್ಚುವ ಮುನ್ನ ಶಟ್‌ಡೌನ್‌ ಮಾಡಿ. ನೀವು ಪ್ರತಿ ಬಾರಿ ಲ್ಯಾಪ್‌ಟಾಪ್‌ ಮುಚ್ಚಿದಾಗಲೂ ಅದು ಶಟ್‌ಡೌನ್‌ ಆಗುತ್ತಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಿ. ನೀವು ಮುಚ್ಚಿದ ಬಳಿಕವೂ ಲ್ಯಾಪ್‌ಟಾಪ್‌ನ ಫ್ಯಾನ್‌ ತಿರುಗುತ್ತಿದ್ದರೆ ಸಮಸ್ಯೆ ಇದೆ ಎಂದರ್ಥ.

ಲ್ಯಾಪ್‌ಟಾಪ್‌ ಹೆಚ್ಚು ಬಿಸಿಯಾಗುತ್ತಿದೆ ಎಂದು ಗೊತ್ತಾದ ತಕ್ಷಣ ಸರ್ವೀಸ್‌ಗೆ ಕೊಡಿ. ನಿಯಮಿತವಾಗಿ ಲ್ಯಾಪ್‌ಟಾಪ್‌ ಅನ್ನು ಸರ್ವೀಸ್‌ ಮಾಡಿಸುವುದು ಬಹಳಷ್ಟು ಸಮಸ್ಯೆಗಳನ್ನು ಮೂಲದಲ್ಲೇ ತಡೆದಂತೆ.

ಹೆಚ್ಚು ಸಾಫ್ಟ್‌ವೇರ್‌ಗಳನ್ನು ಬಳಸುವ ಸಂದರ್ಭದಲ್ಲಿ ಪ್ರೊಸೆಸರ್‌ ಹೆಚ್ಚು ಬಿಸಿಯಾಗುತ್ತಲೇ ಇರುತ್ತದೆ. ಇಂಥ ಸಂದರ್ಭದಲ್ಲಿ ಲ್ಯಾಪ್‌ಟಾಪ್‌ ಕೂಲರ್‌ಗಳನ್ನು ಬಳಸಿ. ₹ 500ರಿಂದ ₹ 1000ದೊಳಗೆ ನಿಮಗೆ ಕೂಲಿಂಗ್‌ ಪ್ಯಾಡ್‌ಗಳು ಆನ್‌ಲೈನ್‌ ಕೊಳ್ಳುದಾಣಗಳಲ್ಲಿ ಸಿಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT