ಭಾನುವಾರ, ಮಾರ್ಚ್ 7, 2021
22 °C

‘ಖಬರಗೇಡಿಗಳನ್ನು ಆಯ್ಕೆ ಮಾಡಬೇಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಖಬರಗೇಡಿಗಳನ್ನು ಆಯ್ಕೆ ಮಾಡಬೇಡಿ’

ವಿಜಯಪುರ: ‘ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ಚಳಿಗಾಲದ ಅಧಿವೇಶನದಲ್ಲಿ ಕೋರಂ ಕೊರತೆ ಸೃಷ್ಟಿಸಿದ ಖಬರಗೇಡಿ ಶಾಸಕರನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮರು ಆಯ್ಕೆ ಮಾಡಬೇಡಿ’ ಎಂದು ಗದುಗಿನ ತೋಂಟದ ಸಿದ್ಧಲಿಂಗ ಸ್ವಾಮೀಜಿ ಬುಧವಾರ ಇಲ್ಲಿ ಮನವಿ ಮಾಡಿದರು.

ಮಾಜಿ ಶಾಸಕ ಆರ್‌.ಆರ್‌. ಕಲ್ಲೂರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕೋರಂ ಕೊರತೆಯಿಂದಾಗಿ ಅಧಿವೇಶನದ ಮೊದಲ ದಿನವೇ ಕಲಾಪ ಆರಂಭಿಸಲು ಸಮಸ್ಯೆ ಉಂಟಾಯಿತು. ಇಂತಹ ಶಾಸಕರ ಅಗತ್ಯ ನಮಗಿಲ್ಲ. ಇವರ‍್ಯಾರನ್ನೂ ಮತ್ತೆ ಆರಿಸಿ ತರಬೇಡಿ’ ಎಂದರು.

‘ಇಂದಿನ ರಾಜಕಾರಣ ಬಹಳ ಕೆಟ್ಟು ಹೋಗಿದೆ. ಇದರಿಂದ ಒಳ್ಳೆಯವರು ರಾಜಕಾರಣ ಪ್ರವೇಶಿಸದಂತಾಗಿದೆ. ಕೆಟ್ಟ ರಾಜಕಾರಣಿಗಳ ಮಾತನ್ನು ಕೇಳಿಯೇ ಈ ಭಾಗದವರು ಎನ್‌ಟಿಪಿಸಿ ಸ್ಥಾಪನೆಗೆ ವಿರೋಧಿಸಿದ್ದರು. ಇನ್ನಾದರೂ ಕೆಟ್ಟ ರಾಜಕಾರಣಿಗಳ ಮಾತು ಕೇಳುವುದನ್ನು ನಿಲ್ಲಿಸಿ. ಒಳ್ಳೆಯದನ್ನು ಬೆಂಬಲಿಸಿ’ ಎಂದು ಸಲಹೆ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.