ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಕ್ಕೆ ‘ಐಎನ್‌ಎಸ್‌ ಕಲ್ವರಿ’ ಅರ್ಪಿಸಿದ ಪ್ರಧಾನಿ

Last Updated 14 ಡಿಸೆಂಬರ್ 2017, 6:21 IST
ಅಕ್ಷರ ಗಾತ್ರ

ಮುಂಬೈ: ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ(ಸಬ್‌ಮರಿನ್‌) ಪಡೆಯ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಐಎನ್‌ಎಸ್‌ ಕಲ್ವರಿ ಲೋಕಾರ್ಪಣೆ ಮಾಡಿದರು.

ಇಲ್ಲಿನ ನೌಕಾನೆಲೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘ಐಎನ್‌ಎಸ್‌ ಕಲ್ವರಿ ಮೇಕ್ ಇನ್‌ ಇಂಡಿಯಾಗೆ ಉತ್ತಮ ಉದಾಹರಣೆಯಾಗಿದ್ದು, ರಕ್ಷಣಾ ಪಡೆಗೆ ಅಗತ್ಯವಿರುವ ಹೆಲಿಕಾಪ್ಟರ್‌ಗಳಿಂದ ಹಿಡಿದು ಜಲಾಂತರ್ಗಾಮಿ ವರೆಗೂ ಎಲ್ಲವನ್ನೂ ಭಾರತದಲ್ಲಿಯೇ ನಿರ್ಮಿಸಲಾಗುತ್ತದೆ’ ಎಂದರು.

ಸಮುದ್ರ ಮಾರ್ಗದಲ್ಲಿ ಭಯೋತ್ಪಾದನೆ, ಕಡಲುಗಳ್ಳತನ ಹಾಗೂ ಡ್ರಗ್‌ ಕಳ್ಳಸಾಗಣೆಯ ವಿರುದ್ಧದ ಹೋರಾಟದಲ್ಲಿ ಭಾರತ ಪ್ರಮುಖ ಪಾತ್ರವಹಿಸಿದೆ. ಈ ಜಲಾಂತರ್ಗಾಮಿ ಸೇರ್ಪಡೆಯಿಂದ ದೇಶದ ನೌಕಾಪಡೆಯ ಬಲ ಹೆಚ್ಚಿದೆ ಎಂದ ಅವರು ಇದರ ನಿರ್ಮಾಣ ಕಾರ್ಯದಲ್ಲಿ ಶ್ರಮಿಸಿದವರಿಗೆ ಅಭಿನಂದನೆ ಸಲ್ಲಿಸಿದರು.

ಹಿಂದೂ ಮಹಾಸಾಗರ ಮತ್ತು ದೇಶದ ಇತಿಹಾಸದಲ್ಲಿ ಅದರ ಪಾತ್ರದ ಕುರಿತು ಮಾತನಾಡಿ, ಸಾಗರ(S.A.G.A.R) ಎಂದರೆ ಈ ಭಾಗದ ಎಲ್ಲರ ಬೆಳವಣಿಗೆ ಮತ್ತು ಭದ್ರತೆ (security and growth for all in the region) ಎಂದರು.

ಇಡೀ ಜಗತ್ತು ಒಂದು ಕುಟುಂಬವೆಂದು ನಂಬಿರುವ ಭಾರತ, ಸದಾ ನೆರೆ ರಾಷ್ಟ್ರಗಳ ಸಹಾಯಕ್ಕೆ ನಿಂತಿದೆ. ಶ್ರೀಲಂಕಾದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದರೆ ಮೊದಲು ಸಹಾಯ ಹಸ್ತ ಚಾಚುವುದು ಭಾರತೀಯ ನೌಕಾಪಡೆ ಎಂದು ಅಭಿಮಾನ ವ್ಯಕ್ತಪಡಿಸಿದರು.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಕಾರ್ಯಕ್ರಮದಲ್ಲಿ ಭಾಗಿಯಾದರು.

ಮುಂಬೈನ್‌ ಮಜಗಾಂವ್‌  ಹಡಗುಕಟ್ಟೆ(ಎಂಡಿಎಲ್‌)ಯಲ್ಲಿ ನಿರ್ಮಿಸಲಾಗಿರುವ ಮೊದಲ ಸ್ಕಾರ್ಪಿಯನ್‌ ದರ್ಜೆಯ ಜಲಾಂತರ್ಗಾಮಿ ಕಲ್ವಾರಿ. ಈಗಾಗಲೇ ಸಾಕಷ್ಟು ಬಾರಿ ಸಮುದ್ರ ಯಾನದ ಪರೀಕ್ಷೆಗೆ ಒಳಪಡಿಸಲಾಗಿದೆ. ಫ್ರೆಂಚ್‌ ನೌಕಾಪಡೆಯ ಡಿಸಿಎನ್‌ಎಸ್‌ ಈ ಜಲಾಂತರ್ಗಾಮಿಯ ವಿನ್ಯಾಸ ಮಾಡಿತ್ತು. ಭಾರತೀಯ ನೌಕಾದಳದ ಮಹತ್ವಾಕಾಂಕ್ಷೆಯ ಜಲಾಂತರ್ಗಾಮಿ 75 ಯೋಜನೆ ಅಡಿ ಇದರ ನಿರ್ಮಾಣವಾಗಿದೆ.

ಪ್ರಾಜೆಕ್ಟ್‌  75: ಫ್ರಾನ್ಸ್‌ ಸಹಯೋಗದಲ್ಲಿ ₹23,000 ಕೋಟಿ ವೆಚ್ಚದಲ್ಲಿ ಒಟ್ಟು ಆರು ‘ಸ್ಕಾರ್ಪಿಯನ್‌’­ ಜಲಾಂತರ್ಗಾಮಿಗಳನ್ನು ನಿರ್ಮಿಸುವ ಯೋಜನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT