ಸೋಮವಾರ, ಮಾರ್ಚ್ 8, 2021
19 °C
ದಾಳಿಯ ಹೊಣೆ ಹೊತ್ತ ಅಲ್ ಶಬಾಬ್ ಉಗ್ರ ಸಂಘಟನೆ

ಸೊಮಾಲಿಯಾ: ಆತ್ಮಾಹುತಿ ಬಾಂಬ್ ದಾಳಿಗೆ 15 ಮಂದಿ ಬಲಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಸೊಮಾಲಿಯಾ: ಆತ್ಮಾಹುತಿ ಬಾಂಬ್ ದಾಳಿಗೆ 15 ಮಂದಿ ಬಲಿ

ಮೊಗದಿಶು: ಇಲ್ಲಿನ ಪೊಲೀಸ್ ತರೆಬೇತಿ ಶಿಬಿರದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 15 ಮಂದಿ ಮೃತಪಟ್ಟಿದ್ದು, 17ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಬೆಳಿಗ್ಗೆ ತರಬೇತಿ ಶಿಬಿರದಲ್ಲಿ ಪೊಲೀಸರು ಪರೇಡ್ ನಡೆಸುತ್ತಿದ್ದ ವೇಳೆ ಬಂದ ಆತ್ಮಾಹುತಿ ಬಾಂಬ್ ದಾಳಿಕೋರ ಸ್ವಯಂ ಸ್ಫೋಟಿಸಿಕೊಂಡಿದ್ದಾನೆ ಎಂದು ಪೊಲೀಸ್ ವಕ್ತಾರ ಮೇಜರ್ ಮೊಹಮ್ಮದ್ ಹುಸೇನ್ ಖಚಿತಪಡಿಸಿದ್ದಾರೆ.

ಇಸ್ಲಾಮಿಕ್ ಉಗ್ರ ಸಂಘಟನೆಯಾದ ಅಲ್ ಶಬಾಬ್ ಈ ದಾಳಿಯ ಹೊಣೆ ಹೊತ್ತಿದೆ. ಮೊಗದಿಶು ಮತ್ತು ಬೇರೆ ನಗರಗಳ ಸುತ್ತಮುತ್ತ  ಬಾಂಬ್ ದಾಳಿ ನಡೆಸುವ ಸಾಧ್ಯತೆ ಇದೆ.

'ನಾವು 27 ಪೊಲೀಸರನ್ನು ಕೊಂದಿದ್ದೇವೆ. ಸಾಕಷ್ಟು ಜನರನ್ನು ಘಾಸಿಗೊಳಿಸಿದ್ದೇವೆ'ಎಂದು ಉಗ್ರ ಸಂಘಟನೆಯ ವಕ್ತಾರ ಅಬ್ದಿಯಾಸಿಸ್ ಅಬು ಮುಸಾಬ್ ಹೇಳಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.