ಬುಧವಾರ, ಮಾರ್ಚ್ 3, 2021
22 °C

ಆರ್‌.ಕೆ.ನಗರ ಉಪಚುನಾವಣೆ: ವೇತನ ಸಹಿತ ರಜೆ ನೀಡಲು ಕಂಪೆನಿಗಳಿಗೆ ಮನವಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಆರ್‌.ಕೆ.ನಗರ ಉಪಚುನಾವಣೆ: ವೇತನ ಸಹಿತ ರಜೆ ನೀಡಲು ಕಂಪೆನಿಗಳಿಗೆ ಮನವಿ

ಚೆನ್ನೈ: ಆರ್‌.ಕೆ ನಗರ ಕ್ಷೇತ್ರದ ಉಪಚುನಾವಣೆ ಪ್ರಯುಕ್ತ ಉದ್ಯೋಗಿಗಳಿಗೆ ವೇತನ ಸಹಿತ ರಜೆ ನೀಡುವಂತೆ ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದ ಉದ್ಯಮ ವಲಯಕ್ಕೆ ಕಾರ್ಮಿಕ ಇಲಾಖೆ ಮನವಿ ಮಾಡಿದೆ.

‘ಆರ್‌.ಕೆ ನಗರ ಕ್ಷೇತ್ರವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಹಾಗೂ ಖಾಸಗೀ ಸಹಭಾಗಿತ್ವದ ಕೈಗಾರಿಕೆ ಹಾಗೂ ವಾಣಿಜ್ಯ ಉದ್ಯಮ ಸಂಸ್ಥೆಗಳು ಉದ್ಯೋಗಿಗಳಿಗೆ ವೇತನ ಸಹಿತ ರಜೆ ಘೋಷಿಸುವಂತೆ ಮನವಿ ಮಾಡುತ್ತಿದ್ದೇವೆ’ ಎಂದು ಕಾರ್ಮಿಕ ಇಲಾಖೆ ಆಯುಕ್ತ ಕ.ಬಾಲಚಂದ್ರನ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಜಯಲಲಿತಾ ನಿಧನದಿಂದಾಗಿ ತೆರವಾಗಿರುವ ವಿಧಾನಸಭೆಯ ಸ್ಥಾನಕ್ಕೆ ಡಿಸೆಂಬರ್‌ 21ರಂದು ಉಪಚುನಾವಣೆ ನಡೆಯಲಿದ್ದು, ಎಐಡಿಎಂಕೆ ಪಕ್ಷದ ಹಿರಿಯ ನಾಯಕ ಇ. ಮಧುಸೂಧನನ್‌, ಡಿಎಂಕೆಯ ಎನ್‌.ಮರುಧು ಗಣೇಶ್‌ ನಡುವೆ ಹೆಚ್ಚಿನ ಪೈಪೋಟಿ ಕಂಡು ಬಂದಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.