ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಸ್‌ನಿಂದ ಹಿಂದಿರುಗಿದ ಮೂವರು ಗಗನಯಾನಿಗಳು

Last Updated 14 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಕಜಕಸ್ತಾನ: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್‌) ಐದು ತಿಂಗಳ ವಾಸದ ಬಳಿಕ ಮೂವರು ಗಗನಯಾತ್ರಿಗಳು ಗುರುವಾರ ಕಜಕಸ್ತಾನಕ್ಕೆ ಬಂದಿಳಿದರು. ಈ ದೃಶ್ಯವನ್ನು ರಷ್ಯಾದ ಬಾಹ್ಯಾಕಾಶ ಸಂಸ್ಥೆ ಬಿಡುಗಡೆ ಮಾಡಿದೆ.

ಅಮೆರಿಕದ ರಾಂಡಿ ಬ್ರೆಸ್‌ನಿಕ್, ಇಟಲಿಯ ಪಾಲೊ ನೆಸ್‌ಪೊಲಿ ಹಾಗೂ ರಷ್ಯಾದ ಸರ್ಜೆ ರೆಝನ್‌ಸ್ಕಿ ಅವರನ್ನು ಸೊಯುಝ್ ಎಂಎಸ್–05 ನೌಕೆ ಹೊತ್ತು ತಂದಿತು.

ಸೂಕ್ಷ್ಮ ಗುರುತ್ವಶಕ್ತಿಯಪ್ರಯೋಗಾಲಯದಲ್ಲಿ 139 ದಿನಗಳ ಅವಧಿಯಲ್ಲಿ ಜೀವಶಾಸ್ತ್ರ, ಅಣು ಜೀವಶಾಸ್ತ್ರ, ಭೌತವಿಜ್ಞಾನ ಹಾಗೂ ಭೂ ವಿಜ್ಞಾನ ಕುರಿತ ಸಾವಿರಾರು ಪ್ರಯೋಗಗಳನ್ನು ಇವರು ನಡೆಸಿದ್ದಾರೆ ಎಂದು ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ತಿಳಿಸಿದೆ.

ನಾಸಾದ ಸ್ಕಾಟ್ ಟಿಂಗ್ಲ್‌, ರಷ್ಯಾದ ಶ್ಕೆಪ್ಲೆರೊವ್ ಹಾಗೂ ಜಪಾನ್‌ನ ನೊರಿಶಿಂಗೆ ಕನೈ ಅವರು ಭಾನುವಾರ ಇಲ್ಲಿನ ಬೈಕನೂರ್‌ ಕೇಂದ್ರದಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಜಿಗಿಯಲಿದ್ದಾರೆ. ಗುರುವಾರ ವಾಪಸಾದ ಮೂವರ ಸ್ಥಾನವನ್ನು ಇವರು ತುಂಬಲಿದ್ದಾರೆ.

ಐಎಸ್‌ಎಸ್‌ನಲ್ಲಿರುವ ಉಳಿದಿರುವ ಮೂವರು ಗಗನಯಾತ್ರಿಗಳನ್ನು ಇವರು ಸೇರಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT