ಮಂಗಳವಾರ, ಮಾರ್ಚ್ 2, 2021
29 °C

ಪ್ರೀ ಕ್ವಾರ್ಟರ್‌ಗೆ ರಾಜ್ಯದ ಶೇಖರ್ ವೀರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರೀ ಕ್ವಾರ್ಟರ್‌ಗೆ ರಾಜ್ಯದ ಶೇಖರ್ ವೀರಸ್ವಾಮಿ

ಬೆಂಗಳೂರು: ಅಗ್ರ ಶ್ರೇಯಾಂಕದ ಕರ್ನಾಟಕದ ಆಟಗಾರ ಶೇಖರ್ ವೀರಸ್ವಾಮಿ ಇಲ್ಲಿ ನಡೆದ ಟೆಬೆಬುಯಿಯಾ ಓಪನ್ ಇಂಡಿಯನ್ ವ್ಹೀಲ್‌ಚೇರ್ ಎಐಟಿಎ ಟೆನಿಸ್ ಟೂರ್‌ ಚಾಂಪಿಯನ್‌ಷಿಪ್‌ನಲ್ಲಿ ಗುರುವಾರ ಪ್ರೀ ಕ್ವಾರ್ಟರ್‌ಫೈನಲ್‌ ತಲುಪಿದ್ದಾರೆ.

ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ (ಕೆಎಸ್‌ಎಲ್‌ಟಿಎ) ಅಂಗಳದಲ್ಲಿ ನಡೆದ ಪುರುಷರ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಶೇಖರ್‌ ವೀರಸ್ವಾಮಿ 9–0ರಲ್ಲಿ ತಮಿಳುನಾಡಿನ ಸದಾಶಿವಂ ಎದುರು ಗೆದ್ದರು.

ದಿನದ ಇತರ ಪಂದ್ಯಗಳಲ್ಲಿ ರಾಜ್ಯದ ಕೆ.ಕೇಶವನ್‌ 9–3ರಲ್ಲಿ ತಮಿಳುನಾಡಿನ ಸಮೀರ್ ಅಹಮ್ಮದ್ ವಿರುದ್ಧವೂ, ಮದೇಶ್ ಚಂದ್ರ 9–5ರಲ್ಲಿ ಆಂಜನಪ್ಪ ಎದುರೂ, ಕೆ.ಗೋಪಿನಾಥ್‌ 9–1ರಲ್ಲಿ ಶಂಕರಲಿಂಗ ಮೇಲೂ, ತಮಿಳುನಾಡಿನ ಡಿ.ಮರಿಯಪ್ಪ 9–0ರಲ್ಲಿ ಕರ್ನಾಟಕದ ಗಂಗಾಧರಪ್ಪ ಎದುರೂ, ಬಿ.ಆರ್. ಸಾಗರ್‌ 9–2ರಲ್ಲಿ ದಿಲೀಪ್ ಕುಮಾರ್ ಮೇಲೂ, ಗೇಬ್ರಿಯಲ್‌ 9–0ರಲ್ಲಿ ಜೋಸೆಫ್‌ ಅಬ್ರಹಾಮ್‌ ವಿರುದ್ಧವೂ, ಆನಂದ್‌ 9–0ರಲ್ಲಿ ಮೊಹಮ್ಮದ್ ಹಾದಿಸ್ ಹಬೀಬ್‌ ಎದುರೂ ಜಯದಾಖಲಿಸಿದ್ದಾರೆ.

ರೋಹನ್ ಬೋಪಣ್ಣ ಚಾಲನೆ: ಭಾರತದ ಟೆನಿಸ್ ಆಟಗಾರ ರೋಹನ್‌ ಬೋಪಣ್ಣ ಟೂರ್ನಿಗೆ ಚಾಲನೆ ನೀಡಿದರು. ‘ಇಲ್ಲಿ ವ್ಹೀಲ್‌ಚೇರ್‌ ಟೆನಿಸ್ ಆಡುವ ಆಟಗಾರರು ಭಾರತ ತಂಡವನ್ನು ಪ್ರತಿನಿಧಿಸಲಿ’ ಎಂದು ಅವರು ಹಾರೈಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.