6

ಈ ವಾರ ತೆರೆಗೆ

Published:
Updated:
ಈ ವಾರ ತೆರೆಗೆ

ಮೂಕಹಕ್ಕಿ

ನೀನಾಸಂ ಮಂಜು ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಚಂದ್ರಕಲಾ ಟಿ.ಆರ್‌. ನಿರ್ಮಿಸಿದ್ದಾರೆ. ಸತೀಶ್‍ಕುಮಾರ್ ಚಿತ್ರಕಥೆ, ಕೋಟಿಗಾನಹಳ್ಳಿ ರಾಮಯ್ಯ ಸಂಭಾಷಣೆ, ಮಣಿಕಾಂತ ಕದ್ರಿ ಸಂಗೀತ, ಹೆಚ್.ಕೆ. ಚಿದಾನಂದ ಛಾಯಾಗ್ರಹಣ ಈ ಚಿತ್ರಕ್ಕಿದೆ.

ತಾರಾಗಣದಲ್ಲಿ ‘ತಿಥಿ’ ಚಿತ್ರದ ಖ್ಯಾತಿಯ ಪೂಜಾ , ಸತೀಶ್‍ಕುಮಾರ್, ಸಂಪತ್‌ಕುಮಾರ್‌, ಅನೀಲ್‌ ಕುಮಾರ್‌ ವಿ. ಮಾ. ನಿಶಾಂತ್‍ ರಾಥೋಡ್, ಚನ್ನಬಸಪ್ಪ ಖಾಳೆ, ಸಿತಾರಾ, ಎಂ.ಕೆ. ಮಠ್, ಶ್ರೀಧರ ಮೂರ್ತಿ, ಪ್ರಕಾಶ್, ಮುಂತಾದವರಿದ್ದಾರೆ.

ಇಲ್ಲ

ಶಂಕರ್ ಎನ್. ನಿರ್ಮಾಣದ ‘ಇಲ್ಲ’ ಚಿತ್ರದ ಚಿತ್ರಕಥೆ  ಮತ್ತು ನಿರ್ದೇಶನ ರಾಜ್‍ಪ್ರಭು ಮಾಡಿದ್ದಾರೆ. ನಾಯಕ ನಟರೂ ಅವರೇ.

ನಾಗರಾಜ್ ಮೂರ್ತಿ ಛಾಯಾಗ್ರಹಣ , ಪವನ್ ಪಾರ್ಥ ಸಂಗೀತ ಚಿತ್ರಕ್ಕಿದೆ. ಈ ಚಿತ್ರದಲ್ಲಿ ರಾಜ್‍ಪ್ರಭು ಮೂರು ಶೇಡ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಏಕಪಾತ್ರದ ಚಿತ್ರ.

ಮರಿ ಟೈಗರ್

ವಿನೋದ್ ಪ್ರಭಾಕರ್ ನಟನೆಯ ಈ ಚಿತ್ರಕ್ಕೆ ಪಿ.ಎನ್‌. ಸತ್ಯ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ರಮೇಶ್ ಕಷ್ಯಪ್ ನಿರ್ಮಿಸಿದ್ದಾರೆ. ವಿನೋದ್ ಪ್ರಭಾಕರ್ ಅವರಿಗೆ ನಾಯಕಿಯಾಗಿ ತೇಜು ಅಭಿನಯಿಸಿದ್ದಾರೆ.

ನೀತು, ಮನೋಜ್, ಕೋಟೆ ಪ್ರಭಾಕರ್, ಬುಲೆಟ್ ಪ್ರಕಾಶ್, ಕಾಟ್ ರಾಜ, ಪೆಟ್ರೋಲ್ ಪ್ರಸನ್ನ ಮುಂತಾದವರು ತಾರಾಬಳಗದಲ್ಲಿದ್ದಾರೆ. ರಾಕ್ ರವಿ ಸಂಗೀತ ನಿರ್ದೇಶನ ಮತ್ತು ಜೈ ಆನಂದ್ ಛಾಯಾಗ್ರಹಣ ಚಿತ್ರಕ್ಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry