ರಾಜಸ್ಥಾನ ‘ಲವ್‌ ಜಿಹಾದ್‌‘: ಬಂಧಿತನ ಹೆಂಡತಿ ಖಾತೆಗೆ ₹ 2.75ಲಕ್ಷ ನೆರವು ನೀಡಿದ 512 ಜನ

7

ರಾಜಸ್ಥಾನ ‘ಲವ್‌ ಜಿಹಾದ್‌‘: ಬಂಧಿತನ ಹೆಂಡತಿ ಖಾತೆಗೆ ₹ 2.75ಲಕ್ಷ ನೆರವು ನೀಡಿದ 512 ಜನ

Published:
Updated:
ರಾಜಸ್ಥಾನ ‘ಲವ್‌ ಜಿಹಾದ್‌‘: ಬಂಧಿತನ ಹೆಂಡತಿ ಖಾತೆಗೆ ₹ 2.75ಲಕ್ಷ ನೆರವು ನೀಡಿದ 512 ಜನ

ಜೈಪುರ: ಮುಸ್ಲಿಂ ದಿನಗೂಲಿಯ ಮೇಲೆ ಹಲ್ಲೆ ನಡೆಸಿ ಜೀವಂತವಾಗಿ ಸುಟ್ಟು ಹತ್ಯೆ ಮಾಡಿದ್ದ ಪ್ರಕರಣದ ಬಂಧಿತ ಆರೋಪಿ ಶಂಭುನಾಥ್ ರಾಯ್‌ಘರ್‌ ಎಂಬಾತನ ಪತ್ನಿಯ ಬ್ಯಾಂಕ್‌ ಖಾತೆಯನ್ನು ರಾಜಸ್ಮಂಡ್‌ ಜಿಲ್ಲಾ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟಕ್ಕಾಗಿ ನ್ಯಾಯಾಲಯದ ವೆಚ್ಚವನ್ನು ಭರಿಸಲು ಶಂಭುನಾಥ್‌ನ ಹೆಂಡತಿಗೆ ನೆರವು ನೀಡುವ ಸಲುವಾಗಿ, ಆಕೆಯ ಬ್ಯಾಂಕ್‌ ಖಾತೆಗೆ 516 ಜನರು ₹ 2.75 ಲಕ್ಷ ನೆರವು ನೀಡಿದ್ದರು.

ಬಂಧಿತನ ಪತ್ನಿಗೆ ಧನ ಸಹಾಯ ಮಾಡುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರ ಸಂದೇಶಗಳನ್ನು ಹರಿಬಿಟ್ಟಿದ್ದ ಇಬ್ಬರು ಸ್ಥಳೀಯ ಉದ್ಯಮಿಗಳನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಸೀತಾ ಅವರ ಬ್ಯಾಂಕ್‌ ಖಾತೆಯ ವಿವರವನ್ನು ದೇಶದಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು. ಅದರಂತೆ ನೆರವು ನೀಡಲು ಮುಂದೆ ಬಂದ 516 ಜನರು, ಸೀತಾ ಅವರ ಖಾತೆಗೆ ₹ 2.75 ಲಕ್ಷ ಸಹಾಯಧನ ನೀಡಿದ್ದಾರೆ. ಸದ್ಯ ಖಾತೆಯನ್ನು ಮುಟ್ಟುಗೋಲು ಹಾಕಿಕೊಂಡಿದ್ದೇವೆ’ ಎಂದು ಉದಯ್‌ಪುರ ವಿಭಾಗದ ಐಜಿ ಆನಂದ್‌ ಶ್ರೀವಾಸ್ತವ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry