‘ಹಾಲಪ್ಪ ಆಚಾರ್‌ ಬಿಜೆಪಿ ಅಭ್ಯರ್ಥಿ’

6

‘ಹಾಲಪ್ಪ ಆಚಾರ್‌ ಬಿಜೆಪಿ ಅಭ್ಯರ್ಥಿ’

Published:
Updated:

ಕುಕನೂರು: ‘ಮಾಜಿ ವಿಧಾನ ಪರಿಷತ್‌ ಸದಸ್ಯ ಹಾಲಪ್ಪ ಆಚಾರ್ ಅವರು ಯಲಬುರ್ಗಾ ಮತ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿಯಾಗಿದ್ದು, ಹಾಲಪ್ಪ ಆಚಾರ್‌ ಅವರನ್ನು ಶಾಸಕರನ್ನಾಗಿ ಮಾಡುವುದೇ ನಮ್ಮ ಗುರಿಯಾಗಿದೆ’ ಎಂದು ಬಿಜೆಪಿ ಮುಖಂಡ ಚಂದ್ರಶೇಖರ್ ಬಿಳಗಿ ಹೇಳಿದರು.

ಸಮೀಪದ ಕದರಿಮೋತಿ ಗ್ರಾಮದಲ್ಲಿ ಗುರುವಾರ ನಡೆದ ನವ ಕರ್ನಾಟಕ ನಿಮಾರ್ಣಕ್ಕಾಗಿ ಬಿಜೆಪಿ ಪರಿವರ್ತನಾ ಯಾತ್ರೆ ಪೂರ್ವ ಸಿದ್ಧತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಾಲಪ್ಪ ಆಚಾರ್‌ ಅವರ ನೇತೃತ್ವದಲ್ಲಿ ಡಿ.19 ರಂದು ಬೆಳ್ಳಿಗೆ 11 ಗಂಟೆಗೆ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದರು.

ಮುಖಂಡ ಹಾಲಪ್ಪ ಆಚಾರ್ ಮಾತನಾಡಿದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸಿ.ಎಚ್ ಪಾಟೀಲ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಈರಪ್ಪ ಕುಡಗುಂಟಿ, ಅಯ್ಯನಗೌಡ ಕೆಂಚಮ್ಮನವರ, ಎ,ಜಿ ಭಾವಿಮನಿ, ರತನ್ ದೇಸಾಯಿ, ಶರಣಪ್ಪ ಈಳಿಗೇರ, ಶಂಭು ಜೋಳದ್, ಮಂಜುನಾಥ ನಾಡಗೌಡ್ರು, ಮಾರುತಿ ಗಾವರಾಳ, ಕನಕಪ್ಪ

ಬ್ಯಾಡರ್, ಮಹೇಶ ಕವಲೂರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry