ಶನಿವಾರ, ಫೆಬ್ರವರಿ 27, 2021
21 °C

ನಟಿಯಾಗುವ ಆಸೆ ಇರಲಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟಿಯಾಗುವ ಆಸೆ ಇರಲಿಲ್ಲ

ತಮ್ಮ ಅಭೂತಪೂರ್ವ ಅಭಿನಯದಿಂದಾಗಿ ಸಾಲು ಸಾಲು ಪ್ರಶಸ್ತಿಗಳನ್ನು ಬಾಚಿ ಕೊಂಡಿರುವ ನಟಿ ಕೊಂಕಣಾ ಸೇನ್‌ ಶರ್ಮಾ. ಅಲ್ಲದೆ ಇತ್ತೀಚೆಗೆ ನಿರ್ಮಾಣಗೊಂಡ ‘ಲಿಪ್‌ಸ್ಟಿಕ್‌ ಅಂಡರ್‌ ಬುರ್ಖಾ’ ಹಾಗೂ ಅವರ ನಿರ್ದೇಶನದ ‘ಡೆತ್‌ ಇನ್‌ ದ ಗುಂಜ್‌’ ಚಿತ್ರಗಳಿಗೆ ಶಹಬ್ಬಾಸ್‌ಗಿರಿಯನ್ನು ಪಡೆದಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ತಮ್ಮ ಗ್ರಾಫ್‌ ಅನ್ನು ಏರಿಸಿಕೊಳ್ಳುತ್ತಲೇ ಬೆಳೆಯುತ್ತಿರುವ ಕೊಂಕಣಾ ಸೇನ್‌ಗೆ ತಾನೊಬ್ಬ ಪತ್ರಕರ್ತೆಯಾಗಬೇಕು ಎಂಬ ಆಸೆ ಇತ್ತಂತೆ.

‘ನಾನು ತುಸು ವಿಭಿನ್ನವಾಗಿ ಹಾಗೂ ಒಬ್ಬಂಟಿಯಾಗಿ ಇರಲು ಇಷ್ಟಪಡುತ್ತಿದ್ದೆ. ಅಮ್ಮ ಜನಪ್ರಿಯ ಬೆಂಗಾಲಿ ನಿಯತಕಾಲಿಕೆಯ ಸಂಪಾದಕಿಯಾಗಿದ್ದಳು. ಶಾಲೆ ಮುಗಿಸಿ ಅಮ್ಮನ ಕಚೇರಿಗೆ ಹೋಗುತ್ತಿದ್ದೆ. ಅವಳ ಟೇಬಲ್‌, ಕುರ್ಚಿಗಳ ಮೇಲೆ ಕುಳಿತು ನಾನೊಬ್ಬ ಪತ್ರಕರ್ತೆಯಾಗಬೇಕು ಎಂದು ಕನಸು ಕಾಣುತ್ತಿದ್ದೆ. ಆದರೆ ಎಂದೂ ನಾನೊಬ್ಬ ನಟಿಯಾಗಬೇಕು ಎಂದುಕೊಂಡಿರಲಿಲ್ಲ. ಯಾಕೆಂದರೆ ನಾನು ಮುಖ್ಯವಾಹಿನಿಯಲ್ಲಿ ಇರಬೇಕು ಎಂದುಕೊಂಡವಳೇ ಅಲ್ಲ. ನಟನೆ ನನಗೆ ದಕ್ಕುತ್ತದೆ ಎನ್ನುವ ಕಲ್ಪನೆಯೂ ಇರಲಿಲ್ಲ. ಯಾರಾದರೂ ನೀನು ನಟಿಯಾಗು ಎಂದರೆ ಸಿಟ್ಟಿನಲ್ಲಿ ಬೇಯುತ್ತಿದ್ದೆ. ಕಿರಿಕಿರಿ ಅನುಭವಿಸುತ್ತಿದ್ದೆ’ ಎಂದು ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದಾರೆ ಕೊಂಕಣಾ ಸೇನ್‌.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.