ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗಿ ಆದಿತ್ಯನಾಥ ಪ್ರಭಾವ: ವಾರ್ಷಿಕ ಐಎಎಸ್ ಸಪ್ತಾಹದಲ್ಲಿ ಮಾಂಸಾಹಾರಕ್ಕೆ ಕತ್ತರಿ!

Last Updated 15 ಡಿಸೆಂಬರ್ 2017, 15:46 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶದ ರಾಜಧಾನಿಯಲ್ಲಿ ನಡೆಯುತ್ತಿರುವ ವಾರ್ಷಿಕ ಐಎಎಸ್ ಸಪ್ತಾಹದಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗೆ ಸಸ್ಯಾಹಾರ ಮಾತ್ರ ಉಣಬಡಿಸಲಾಗಿದೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಯೋಗಿ ಸಸ್ಯಾಹಾರಿ ಆಗಿರುವುದರಿಂದ ಮತ್ತು ಜನರ ಬೇಕು ಬೇಡಗಳನ್ನು ಮನಗಂಡು ಈ ಮೆನು ಸಿದ್ಧಪಡಿಸಲಾಗಿದೆ.

ಗುರುವಾರ ಆರಂಭವಾದ ಈ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿ ಮೆನುವಿನಲ್ಲಿ ಮೀನು, ಮಾಂಸ, ಕೋಳಿ ಪದಾರ್ಥವನ್ನು ಕೈ ಬಿಡಲಾಗಿದೆ.

ಕಳೆದ ವರ್ಷ ರಾಜ್ಯಪಾಲರಾದ ರಾಮ್ ನಾಯಕ್ ಅವರು ಆತಿಥೇಯರಾಗಿದ್ದ ಈ ಕಾರ್ಯಕ್ರಮದಲ್ಲಿ ಅವಧ್‍ನ ಮಾಂಸಾಹಾರ ಖಾದ್ಯಗಳ ಭೋಜನ ಏರ್ಪಡಿಸಲಾಗಿತ್ತು. ಆದರೆ ಈ ಬಾರಿ ಬರೀ ಸಸ್ಯಾಹಾರವಷ್ಟೇ ಎಂದು ಅಲ್ಲಿನ ಪ್ರತಿನಿಧಿಗಳು ಬೇಸರ ವ್ಯಕ್ತಪಡಿಸಿರುವುದಾಗಿ ಐಎಎನ್‍ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT