ಮೇ 19ಕ್ಕೆ ರಾಜಕುಮಾರ ಹ್ಯಾರಿ– ಮೇಘನ್ ಮದುವೆ

ಲಂಡನ್: ಬ್ರಿಟನ್ ರಾಜಕುಮಾರ ಹ್ಯಾರಿ ಮತ್ತು ಅಮೆರಿಕದ ನಟಿ ಮೇಘನ್ ಮಾರ್ಕೆಲ್ ಅವರ ವಿವಾಹ ಸಮಾರಂಭ 2018 ಮೇ 19ರಂದು ವಿಂಡ್ಸರ್ ಕ್ಯಾಸ್ಟೆಲ್‌ನ ಸೇಂಟ್ ಜಾರ್ಜ್ ಚಾಪೆಲ್‌ನಲ್ಲಿ ನಡೆಯಲಿದೆ ಎಂದು ಕೆನ್ಸಿಂಗ್ಟನ್ ಅರಮನೆ ಶುಕ್ರವಾರ ಪ್ರಕಟಿಸಿದೆ.
33 ವರ್ಷ ವಯಸ್ಸಿನ ಹ್ಯಾರಿ ಮತ್ತು 36 ವರ್ಷ ವಯಸ್ಸಿನ ವಿಚ್ಛೇದಿತ ನಟಿ ಮೇಘನ್ ಮಾರ್ಕೆಲ್ ಅವರ ನಿಶ್ಚಿತಾರ್ಥ ಕಳೆದ ತಿಂಗಳು ನಡೆದಿತ್ತು. ದಂಪತಿ ಕೆನ್ಸಿಂಗ್ಟನ್ ಅರಮನೆಯ ನೆಲ ಅಂತಸ್ತಿನ ಹ್ಯಾರೀಸ್ ಕಾಟೇಜ್‌ನಲ್ಲಿ ನೆಲೆಸಲಿದ್ದಾರೆ. ವಿವಾಹದ ನಂತರ ಮಾರ್ಕೆಲ್ ಅವರು ಬ್ರಿಟನ್‌ನ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲಿದ್ದಾರೆ. ಅಂತರರಾಷ್ಟ್ರೀಯ ಸೇವಾ ಚಟುವಟಿಕೆಯನ್ನು ಮುಂದುವರಿಸಲಿದ್ದಾರೆ.
ಮಾರ್ಕೆಲ್ ಅವರು ಈ ವರ್ಷದ ಕ್ರಿಸ್‌ಮಸ್ ಹಬ್ಬವನ್ನು ಬ್ರಿಟನ್ ರಾಜಮನೆತನದ ಜೊತೆ 2ನೇ ರಾಣಿ ಎಲಿಜಬೆತ್ ಅವರ ‘ಸ್ಯಾಂಡ್ರಿಂಗ್‌ಹ್ಯಾಮ್ ಎಸ್ಟೇಟ್’ ನಲ್ಲಿ ಆಚರಿಸಲಿದ್ದಾರೆ. ಮಾರ್ಕೆಲ್ ಅವರು ರಾಜ ಮನೆತನದಿಂದ ಕ್ರಿಸ್‌ಮಸ್‌ಗೆ ಆಹ್ವಾನಿತರಾದ ಮೊದಲ ನಿಶ್ಚಿತ ವಧು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.