7

46ನೇ ದಿನಕ್ಕೆ ಕಾಲಿಟ್ಟ ಹೋರಾಟ

Published:
Updated:

ಗೋಣಿಕೊಪ್ಪಲು: ಪೊನ್ನಂಪೇಟೆ ತಾಲ್ಲೂಕು ರಚನೆಗೆ ಒತ್ತಾಯಿಸಿ 45 ದಿನಗಳಿಂದ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಮುಸ್ಲಿಂ ವಿವಿಧ ಸಂಘ ಸಂಸ್ಥೆಗಳು ಶುಕ್ರವಾರ ಪ್ರತಿಭಟನೆ ನಡೆಸಿದವು.

ಅಲ್ಲದೇ, ಪೊನ್ನಂಪೇಟೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪೊನ್ನಂಪೇಟೆ ಕೊಡವ ಸಮಾಜದ ಬಳಿಯಿಂದ ಗಾಂಧಿ ಮಂಟಪದವರೆಗೆ ಮೆರವಣಿಗೆ ನಡೆಸಿ, ಅರ್ಧಗಂಟೆಗೂ ಹೆಚ್ಚು ಸಮಯ ಮುಖ್ಯರಸ್ತೆಯಲ್ಲಿ ರಸ್ತೆ ತಡೆ ನಡೆಸಿದರು. ಪ್ರತಿಭಟನೆ ತೀವ್ರಗೊಳಿಸುವ ನಿರ್ಧಾರ ಕೈಗೊಂಡ ಅವರು, ಯಾವುದೇ ಬೆಲೆ ತೆತ್ತಾದರೂ ತಾಲ್ಲೂಕನ್ನು ಪಡೆಯುತ್ತೇವೆ ಎಂದು ಶಪಥ ಮಾಡಿದರು.

ಹೋರಾಟದಲ್ಲಿ ಶಾಫಿಯ ಮಸೀದಿ, ಬದರ್ ಜುಮ್ಮಾ ಮಸೀದಿ, ಬಿಳೂರು ಜಾಮಿಯಾ ಮಸೀದಿ, ಕಾಟ್ರಕೊಲ್ಲಿಯ ಮಾಯುದ್ದೀನ್ ಜುಮ್ಮಾ ಮಸೀದಿ, ಪೊನ್ನಂಪೇಟೆಯ ಇಟ್ಟೀರ, ಹರಿಹರದ ಮುಕ್ಕಾಟೀರ ಕುಟುಂಬಸ್ಥರೊಂದಿಗೆ ನಾಗರಿಕ ವೇದಿಕೆ ಅಧ್ಯಕ್ಷ ಪಿ.ಬಿ.ಪೂಣಚ್ಚ, ಮುಖಂಡರಾದ ಚೆಪುಡೀರ ಪೊನ್ನಪ್ಪ, ಮಾಚಿಮಾಡ ರವೀಂದ್ರ, ಕೋಳೆರ ದಯಾ ಚಂಗಪ, ಲಕ್ಷ್ಮಣ, ಚೆಪುಡೀರ ಸೋಮಯ್ಯ, ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಪುಚ್ಚಿಮಾಡ ವಸಂತ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry