7

ಪೋಲಿಯೊ ಅಭಿಯಾನ ಕ್ರಾಂತಿಕಾರಕ ಹೆಜ್ಜೆ

Published:
Updated:
ಪೋಲಿಯೊ ಅಭಿಯಾನ ಕ್ರಾಂತಿಕಾರಕ ಹೆಜ್ಜೆ

ಚಾಮರಾಜನಗರ: ಆರೋಗ್ಯ ಕ್ಷೇತ್ರದಲ್ಲಿನ ಕ್ರಾಂತಿಕಾರಿ ಬದಲಾವಣೆಗೆ ಪಲ್ಸ್‌ ಪೋಲಿಯೊ ಅಭಿಯಾನವೂ ಕಾರಣವಾಗಿದ್ದು, ದೇಶದಲ್ಲಿ ಇದು ಸಂಪೂರ್ಣ ಯಶಸ್ವಿಯಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ಹರೀಶ್‌ಕುಮಾರ್‌ ಹೇಳಿದರು.

ನಗರದ ಜಿಲ್ಲಾಪಂಚಾಯಿತಿಯ ಸಭಾಂಗಣದಲ್ಲಿ ಶುಕ್ರವಾರ ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಡೆದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಪಲ್ಸ್ ಪೋಲಿಯೊ ಒಂದು ರಾಷ್ಟ್ರೀಯ ಅಭಿಯಾನ. ದೇಶದ ಎಲ್ಲ ಭಾಗದ ಮಕ್ಕಳಿಗೂ ಏಕ ಕಾಲದಲ್ಲಿ ಪೋಲಿಯೊ ಹನಿ ಹಾಕುವ ಮೂಲಕ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.

ಜಿಲ್ಲೆಯಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮಗಳು ಉತ್ತಮ ಮಟ್ಟದಲ್ಲಿ ನಡೆದಿದೆ. ಆರೋಗ್ಯ ಮತ್ತು ಶಿಕ್ಷಣ ನೀಡುವುದು ಸರ್ಕಾರದ ಕೆಲಸ ಮಾತ್ರವಲ್ಲ. ಇದರ ಯಶಸ್ಸಿಗೆ ಸಮುದಾಯದ ಪಾತ್ರವೂ ಮುಖ್ಯ. ಜತೆಗೆ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಚ್. ಪ್ರಸಾದ್ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 75,000 ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವ ಗುರಿಹೊಂದಲಾಗಿದೆ. ಹೆಚ್ಚುವರಿಯಾಗಿ ಬೇರೆ ಜಿಲ್ಲೆಯ ಸುಮಾರು 5,000 ಮಕ್ಕಳಿಗೆ ಬಸ್‌ ನಿಲ್ದಾಣ, ಜಾತ್ರೆ, ಸಂತೆಯಲ್ಲಿ ಲಸಿಕೆ ಹಾಕಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯು ಅಭಿಯಾನದಲ್ಲಿ ಪ್ರತಿವರ್ಷ ಶೇ 99 ರಿಂದ 100ರಷ್ಟು ಸಾಧನೆ ಮಾಡುತ್ತಿದೆ. ಆಶಾ ಕಾರ್ಯಕರ್ತೆಯನ್ನು ಅಭಿಯಾನದಲ್ಲಿ ತೊಡಗಿಸಿಕೊಳ್ಳಲಾಗಿದೆ. ಎಲ್ಲರಿಗೂ ಈ ಬಗ್ಗೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಆರ್.ಸಿ.ಎಚ್ ಅಧಿಕಾರಿ ಕೆ.ಎಂ. ವಿಶ್ವೇಶ್ವರಯ್ಯ ಮಾತನಾಡಿ, ಎಲ್ಲರನ್ನು ಒಗ್ಗೂಡಿಸಿ ಪಲ್ಸ್ ಪೋಲಿಯೊ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮೊದಲನೇ ಹಂತಕ್ಕೆ ಮುಖ್ಯವಾಗಿ ವಾಹನದ ವ್ಯವಸ್ಥೆ ಮಾಡಲಾಗಿದೆ. 2ನೇ ಹಂತದ ಕಾರ್ಯಕ್ರಮಕ್ಕೆ ವಾಹನದ ಕೊರತೆ ಇದ್ದು, ಸರ್ಕಾರಿ ವಾಹನಗಳ ಜೊತೆಗೆ ಖಾಸಗಿ ವಾಹನ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು. ಕಾರ್ಯಾಗಾರದಲ್ಲಿ ಆರೋಗ್ಯ ಇಲಾಖೆಯ ಎಸ್ಎಂಒ ಸತೀಶ್‌ಚಂದ್ರ, ಡಾ. ಅನಿಲ್‌ಕುಮಾರ್, ರಾಜು ಹಾಜರಿದ್ದರು.

* * 

ಆರೋಗ್ಯವಂತ ಸಮಾಜ ನಿರ್ಮಾಣವಾದಾಗ ಮಾತ್ರ ಶೈಕ್ಷಣಿಕ ಅಭಿವೃದ್ಧಿ ಸಾಧಿಸಲು ಹಾಗೂ ಸರ್ಕಾರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಸಾಧ್ಯ

ಡಾ.ಕೆ. ಹರೀಶ್‌ಕುಮಾರ್  ಜಿ.ಪಂ. ಸಿಇಒ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry