ಎಚ್‌1ಬಿ ವೀಸಾ ನಿಯಮ ಬದಲು ಪತ್ನಿ–ಪತಿಯ ಉದ್ಯೋಗಕ್ಕೆ ಕತ್ತರಿ?

7

ಎಚ್‌1ಬಿ ವೀಸಾ ನಿಯಮ ಬದಲು ಪತ್ನಿ–ಪತಿಯ ಉದ್ಯೋಗಕ್ಕೆ ಕತ್ತರಿ?

Published:
Updated:
ಎಚ್‌1ಬಿ ವೀಸಾ ನಿಯಮ ಬದಲು ಪತ್ನಿ–ಪತಿಯ ಉದ್ಯೋಗಕ್ಕೆ ಕತ್ತರಿ?

ವಾಷಿಂಗ್ಟನ್: ಎಚ್‌1ಬಿ ವೀಸಾ ಹೊಂದಿರುವವರ ಪತ್ನಿ-ಪತಿಗೆ ಅಮೆರಿಕದಲ್ಲಿ ಉದ್ಯೋಗ ಮಾಡಲು ಅವಕಾಶ ಕಲ್ಪಿಸುವ ನಿಯಮ ರದ್ದುಗೊಳಿಸಲು ಡೊನಾಲ್ಡ್ ಟ್ರಂಪ್ ಸರ್ಕಾರ ಚಿಂತನೆ ನಡೆಸಿದೆ. ಈ ನಿರ್ಧಾರದಿಂದ ಸಾವಿರಾರು ಭಾರತೀಯರಿಗೆ ತೊಂದರೆಯಾಗುವ ಸಾಧ್ಯತೆಯಿದೆ.

ಒಬಾಮ ಸರ್ಕಾರದ ರೂಪಿಸಿದ್ದ ನಿಯಮಾವಳಿಯಲ್ಲಿ ಬದಲಾವಣೆ ತರುವ ಆಲೋಚನೆ ಇದೆ ಎಂದು ಅಮೆರಿಕದ ಆಂತರಿಕ ಭದ್ರತಾ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ. ‘ಗ್ರೀನ್‌ ಕಾರ್ಡ್‌ ನಿರೀಕ್ಷೆಯಲ್ಲಿರುವವರು ಅಥವಾ ಎಚ್‌1ಬಿ ವೀಸಾ ಹೊಂದಿರುವವರ ಹೆಂಡತಿ–ಗಂಡ ಎಚ್–4 ಡಿಪೆಂಡೆಂಟ್ ವೀಸಾ ಪಡೆಯಲು ಅರ್ಹರು’ ಎಂಬ ನಿಯಮ 2015ರಿಂದ ಜಾರಿಯಲ್ಲಿದೆ. ಒಬಾಮ ಜಾರಿಗೊಳಿಸಿದ್ದ ಈ ಆದೇಶದಿಂದ 2016ರಲ್ಲಿ 41 ಸಾವಿರಕ್ಕೂ ಹೆಚ್ಚು ಮಂದಿ ಎಚ್–4 ವೀಸಾದಡಿ ಉದ್ಯೋಗ ಪಡೆದಿದ್ದರು. ಈ ವರ್ಷದ ಜೂನ್‌ವರೆಗೆ ಇಂತಹ 36 ಸಾವಿರ ವೀಸಾ ನೀಡಲಾಗಿದೆ.

ಅಮೆರಿಕನ್ನರ ಉದ್ಯೋಗಕ್ಕೆ ಅಡ್ಡಿಯಾಗಿರುವ ಈ ನಿಯಮವನ್ನು ತೆಗೆದುಹಾಕುವಂತೆ ಆಗ್ರಹಿಸಿ 2015ರಲ್ಲೇ ‘ಸೇವ್ ಜಾಬ್ ಯುಎಸ್ಎ’ ಎಂಬ ಸಂಘಟನೆಯ ನ್ಯಾಯಾಲಯದಲ್ಲಿ ದಾವೆ ಹೂಡಿ, ಕಾನೂನು ಹೋರಾಟ ನಡೆಸುತ್ತಿದೆ. ನುರಿತ ತಂತ್ರಜ್ಞರನ್ನು ಆಕರ್ಷಿಸಲು ಅಮೆರಿಕ ಸರ್ಕಾರ ಎಚ್‌1ಬಿ ವೀಸಾ ನೀಡುತ್ತದೆ. ಈ ವೀಸಾ ಪಡೆಯುವವರ ಪೈಕಿ ಶೇ70ರಷ್ಟು ಭಾರತೀಯ ಉದ್ಯೋಗಿಗಳು.

ಮುಖ್ಯಾಂಶಗಳು

* ಒಬಾಮ ಸರ್ಕಾರದ ನಿಯಮಾವಳಿ ಬದಲಾವಣೆ

* ‘ಸೇವ್ ಜಾಬ್ ಯುಎಸ್ಎ’ ಸಂಘಟನೆಯಿಂದ ಕಾನೂನು ಹೋರಾಟ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry