7

ರಾಹುಲ್‌ಗೆ ಚುಕ್ಕಾಣಿ: ಸಂಭ್ರಮ

Published:
Updated:

ಮಂಡ್ಯ: ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಅಧಿಕಾರ ವಹಿಸಿಕೊಂಡ ಕಾರಣ ಪಕ್ಷದ ಜಿಲ್ಲಾ ಘಟಕದ ಕಾರ್ಯಕರ್ತರು ನಗರದ ಜೆ.ಸಿ.ವೃತ್ತದಲ್ಲಿ ಸಿಹಿ ವಿತರಿಸಿ ಸಂಭ್ರಮಿಸಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್.ಆತ್ಮಾನಂದ ಮಾತನಾಡಿ, ‘ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ರಾಹುಲ್‌ ಗಾಂಧಿ ಅವರು ಈಗ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಪಕ್ಷ ಸಂಘಟನೆಗೆ ಈಗಾಗಲೇ ಕಾರ್ಯ ಯೋಜನೆ ರೂಪಿಸಿರುವ ಇವರಿಗೆ ದೇವರು ಇನ್ನಷ್ಟು ಶಕ್ತಿ ಕೊಡಲಿ’ ಎಂದು ಹಾರೈಸಿದರು.

ನಗರದ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಫ್ಯಾಕ್ಟರಿ ವೃತ್ತದಿಂದ ಕಾಂಗ್ರೆಸ್‌ ಕಚೇರಿಯವರೆಗೂ ಯೂತ್‌ ಕಾಂಗ್ರೆಸ್‌ ವತಿಯಿಂದ ಬೈಕ್‌ ರ‍್ಯಾಲಿ ನಡೆಸಲಾಯಿತು. ನಗರಸಭೆ ಸದಸ್ಯ ಹೊಸಹಳ್ಳಿ ಬೋರೇಗೌಡ, ಉಪಾಧ್ಯಕ್ಷೆ ಸುಜಾತಮಣಿ, ಸದಸ್ಯ ಬಿ.ಪಿ.ಪ್ರಕಾಶ್‌, ಎಂ.ಡಿ.ಜಯರಾಂ, ಹನ್ಸಿಯಾಬಾನು, ಚಂದ್ರಕಲಾ, ಶುಭದಾಯಿನಿ, ಮಮತಾ, ರಾಧ, ರಫೀವುಲ್ಲಾ, ಸಿ.ಎಂ. ದ್ಯಾವಪ್ಪ, ಅರವಿಂದ್‌, ಎಂ.ಎಸ್.ಚಿದಂಬರ್, ಎಸ್‌.ಡಿ.ಸುರೇಶ್‌, ಲೋಕೇಶ್‌ಗೌಡ, ಜಬೀವುಲ್ಲಾ, ಸಂಪತ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry