7

‘ಜೆಡಿಎಸ್‌ಗೆ ಬಹುಮತ ಖಚಿತ’

Published:
Updated:

ಯಳಂದೂರು: ಪಟ್ಟಣದಲ್ಲಿ ಶನಿವಾರ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ 59ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಪಟ್ಟಣದ ಭೂಲಕ್ಷ್ಮಿ ವರಾಹ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಕೇಕ್ ಕತ್ತರಿಸಿ ಕುಮಾರಸ್ವಾಮಿ ಮುಖವಾಡ ಧರಿಸಿದ ಬಾಲಕನಿಗೆ ಕೇಕ್ ತಿನ್ನಿಸಲಾಯಿತು. ನಂತರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣುಗಳನ್ನು ವಿತರಿಸಲಾಯಿತು.

ಮುಖಂಡ ಮುಳ್ಳೂರು ಶಿವಮಲ್ಲು ಮಾತನಾಡಿ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷ 113 ಸ್ಥಾನ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಮುಖಂಡ ಅಜೀಕ್ ಅಹಮ್ಮದ್ ಮಾತನಾಡಿದರು.

ಪಕ್ಷದ ಮುಖಂಡರಾದ ತಾ.ಪಂ ಮಾಜಿ ಸದಸ್ಯ ಡಿ. ವೆಂಕಟಾಚಲ, ಡಿ.ಸಿ. ಬಾಬು, ಸುರೇಖಾ, ಆರ್. ಉಮೇಶ್, ನಾಗರಾಜು, ಮಹಾದೇವಪ್ಪ, ವೆಂಕಟೇಶ್, ಶಾಂತರಾಜು, ಚೇತನ್, ಶಿವು, ಶಿವಸ್ವಾಮಿ, ಬಸವಣ್ಣ, ಶ್ರೀಧರ್, ಶಿವಸ್ವಾಮಿ, ಇರ್ಫಾನ್, ರಜಿನಿಕಾಂತ್ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry